ಜೊಲ್ಲೆ ವಿದ್ಯಾರ್ಥಿವೇತನ ಪರೀಕ್ಷೆ ಫಲಿತಾಂಶ ಪ್ರಕಟ

25CHIKODIGRAMEEN1 BASAVPRASAD
Published on

ಚಿಕ್ಕೋಡಿ ಗ್ರಾಮೀಣ: ಜೊಲ್ಲೆ ಶಿಕ್ಷಣ ಸಂಸ್ಥೆಯಿಂದ ನಿಪ್ಪಾಣಿಯಲ್ಲಿ ಪ್ರಾರಂಭಿಸಲಾಗುತ್ತಿರುವ ಶ್ರೀ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಥಮ ವರ್ಷದ ದಾಖಲಾತಿಗೋಸ್ಕರ ನಡೆಸಲಾದ ‘ಶಾಸಕಿ ಶಶಿಕಲಾ ಜೊಲ್ಲೆ ವಿದ್ಯಾರ್ಥಿವೇತನ ಪರೀಕ್ಷೆ -2025’ರ ಫಲಿತಾಂಶ ಪ್ರಕಟಿಸಲಾಗಿದೆ. ಟಾಪ್ ಮೇರಿಟ್ ಆಧಾರದ ಮೇಲೆ ಆಯ್ಕೆಯಾದ 20 ವಿದ್ಯಾರ್ಥಿಗಳಿಗೆ 60 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಗುವುದು ಎಂದು ಜೊಲ್ಲೆ ಗ್ರುಪ್ ಸಂಸ್ಥೆಯ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾಖಲಾತಿಗಾಗಿ ಜ.5 ರಿಂದ ಫೆ.2ರ ವರೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿ, ಯಕ್ಸಂಬಾ, ಹುಕ್ಕೇರಿ, ಯಮಕನಮರಡಿ, ಕಾಗವಾಡ, ಅಥಣಿ, ರಾಯಬಾಗ ಮತ್ತು ಹಾರೂಗೇರಿ ಒಳಗೊಂಡು 8 ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಈ ಪರೀಕ್ಷೆಯಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೌಲ್ಯಮಾಪನ ಪಕ್ರಿಯೆ ನಂತರ ಶ್ರೇಷ್ಠ ಪ್ರದರ್ಶನ ನೀಡಿದ ಅಗ್ರ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಆಯ್ಕೆಯಾದ ವಿದ್ಯಾರ್ಥಿಗಳು: ಶಿರಗುಪ್ಪಿಯ ಅಭಿನವ ಬೇನಾಡೆ, ನಿಪ್ಪಾಣಿಯ ತನುಷ ವಡಗಾಂವೆ, ಬಸ್ತವಾಡದ ಅಮೃತಾ ಮುದಕಪ್ಪಗೋಳ, ಅಕ್ಕಿವಾಟದ ಪ್ರನವಕುಮಾರ ಮಗದುಮ್ಮ, ಅಥಣಿಯ ಸಾಕ್ಷಿ ಇಚಲಕರಂಜಿ, ಸವದಿಯ ಪ್ರಸನ್ನ ಗುರವ, ಯಮಕನಮರಡಿಯ ಝೈನಾ ಚೌಧರಿ, ಚಿಕ್ಕಾಲಗುಡ್ಡದ ಸಂಕೇತ ಮರಡಿ, ನಿಪ್ಪಾಣಿಯ ತನೀಷ್ಕಾ ಸಪ್ತೆ, ಬೋರಗಲ್ಲದ ಸಮರ್ಥ ಯಶವಂತ, ಅಂಕಲಿಯ ಯಶವಂತ ನಿಕಮ, ಚಿಕ್ಕೋಡಿಯ ಅದಿತ್ಯ ಕರಡೆ, ರಾಯಬಾಗದ ಉದಯ ಬಮ್ಮನ್ನವರ, ನಿಪ್ಪಾಣಿಯ ಸಾಯಿ ಚೌವ್ಹಾನ, ನಾಗನೂರದ ಚಿನ್ಮಯ ನಿಂಬಾಳಕರ, ಮೇಖಳಿಯ ನಿತೇಶ ಬೆಲಸೆ, ಜೂಗುಳದ ಕೃಷ್ಣಾತ ಬಾಗಣೆ, ಮಾಂಜರಿಯ ಶುಭಂ ಸಾವಂತ, ಬೇಡಕಿಹಾಳದ ಪೂರ್ವಾ ಖೋತ, ಖಡಕಲಾಟದ ನೂಪುರ್ ಪಾಟೀಲ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಆಯ್ಕೆಯಾಗಿದ್ದಾರೆ.

ಆಯ್ಕೆಯ ವಿವರವನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕೂಡ ಪ್ರಕಟಿಸಲಾಗಿದೆ. ಪೋಷಕರು, ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊ.9731309554 ಸಂಪರ್ಕಿಸಲು ಕೋರಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ,

ಶಾಸಕಿ ಶಶಿಕಲಾ ಜೊಲ್ಲೆ ಅವರು ಅಭಿನಂದಿಸಿದ್ದಾರೆ ಎಂದು ಬಸವಪ್ರಸಾದ ಜೊಲ್ಲೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net