ಜೋಗಳೇಕರ ಕಾರ್ಯ ಸ್ಮರಣೀಯ

11 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯನ ಸಾಮಾಜಿಕ ಜೀವನದಲ್ಲಿ ಜ್ಯೋತಿಷ್ಯದ ಪ್ರಾಮುಖ್ಯ ಹಲವು ಪ್ರಕಾರದ್ದು. ಮಾನವೀಯ ಅವಶ್ಯಕತೆ, ಆಶೋತ್ತರಗಳೂ ಜ್ಯೋತಿಷ್ಯದ ಅನ್ವೇಷಣಕ್ಕೆ ಸತತವಾದ ಪ್ರೇರಕಶಕ್ತಿ ಒದಗಿಸುತ್ತದೆ ಎಂದು ಸಂಸತ ಉಪನ್ಯಾಸಕ ನವೀನಶಾಸ್ತ್ರಿ ಪುರಾಣಿಕ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ದಿ. ಎನ್​.ಕೆ. ಜೋಗಳೇಕರ ಸ್ಮರಣಾರ್ಥ ದತ್ತಿ ನಿಮಿತ್ತ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಭಾರತೀಯ ಜ್ಯೋತಿಷ್ಯ ಶಾಸ್ತ್ರ ಮತ್ತು ವೈಜ್ಞಾನಿಕ ಚಿಂತನೆಗಳು ವಿಷಯ ಅವರು ಮಾತನಾಡಿದರು.
ಜ್ಯೋತಿಷ್ಯವು ಎಲ್ಲ ತುರ್ತು ಅವಶ್ಯಕತೆಗಳಿಗೂ ನಿದಿರ್ಷ್ಟ ಸಂಬಂಧ ಪಡೆದಿದೆ. ಮನುಷ್ಯನು ತನ್ನ ಪೂರ್ವಜನ್ಮದ ಕರ್ಮವಿಪಾಕದಿಂದ ಸದ್ಯದ ಬದುಕಿನಲ್ಲಿ ಅನುಭವಿಸುವ ಐಶ್ವರ್ಯ, ಖ್ಯಾತಿ, ಪದವಿ, ಸ್ಥಾನಮಾನ, ವಿಪತ್ತು, ಅನಾರೋಗ್ಯ ಮತು ದೌರ್ಭಾಗ್ಯಗಳ ಪ್ರಮಾಣವನ್ನು ಯೋಗಗಳು ತಿಳಿಸುತ್ತವೆ. ವಿವಿಧ ಗ್ರಹಸ್ಥಿತಿಗಳು ನಾವು ಪಡೆದುಕೊಂಡು ಬಂದಿರುವ ದೈಹಿಕ, ಮಾನಸಿಕ ಪ್ರವೃತ್ತಿಗಳ ಮೊತ್ತವನ್ನು ಸೂಚಿಸುತ್ತವೆ. ಅಲ್ಲದೆ ಬಹಳ ಪ್ರಾಚಿನವಾದ ಜ್ಯೋತಿಷ್ಯ ಶಾಸ್ತ್ರ ವಿಜ್ಞಾನದ ಒಂದು ಭಾಗವೇ ಆಗಿದೆ. ಅದು ಜ್ಯೋತಿವಿರ್ಜ್ಞಾನ ಎಂದರು.
ಅಧ್ಯತೆ ವಹಿಸಿದ್ದ ಡಾ. ಆನಂದ ಹಂದಿಗೋಳ ಮಾತನಾಡಿ, ಆ ಜನ್ಮ ಬ್ರಹ್ಮಚಾರಿಗಳಾಗಿದ್ದ ಜೋಗಳೇಕರ ಶಿಸ್ತಿನ ಜೀವನ ನಡೆಸಿದವರು. ಸಮಾಜದಲ್ಲಿ ನಡೆಯುತ್ತಿರುವ ಟನೆಗಳನ್ನೇ ಆಧರಿಸಿ, ಪ್ರಾಯೋಗಿಕ ಅನುಭವದಿಂದ 30ಕ್ಕೂ ಹೆಚ್ಚು ಜ್ಯೋತಿಷ್ಯ ಗ್ರಂಥ ರಚಿಸಿದವರು. ಸ್ವಾತಂತ್ರ$್ಯ ಹೋರಾಟಗಾರರಾಗಿದ್ದ ಅವರು ಶಕುನ ಜ್ಯೋತಿಷ್ಯಕಾರರನ್ನು ಕರೆಯಿಸಿ ಕಾರ್ಯಾಗಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇವರಿಗೆ ಜ್ಯೋತಿಷ್ಯ ಬ್ರಹ್ಮ, ಜ್ಯೋತಿಷ್ಯ ಪಿತಾಮಹ ಎಂಬ ಬಿರುದುಗಳು ಬಂದಿವೆ ಎಂದರು.
ಪಾರ್ವತಿ ಹಾಲಭಾವಿ, ವಿಜಯಲಕ್ಷಿ$್ಮ ಕಲ್ಯಾಣಶೆಟ್ಟರ, ಗೀತಾ ಕುಂಬಿ, ಕೆ.ಜಿ. ದೇವರಮನಿ, ಮಹಾಂತೇಶ ನರೇಗಲ್​, ಎಸ್​.ಕೆ. ಕುಂದರಗಿ, ಸರೋಜಿನಿ ದೇವಮಾನೆ, ಎಂ.ಬಿ. ಹೆಗ್ಗೇರಿ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಿ.ಮ. ರಾಚಯ್ಯನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net