

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ತಾಲ್ಲೂಕಿನ ಕಾಕತಿಯಲ್ಲಿ ಐಟಿಸಿ ಹೋಟೆಲ್ಸ್ ಸಹಭಾಗಿತ್ವದಲ್ಲಿ ಆರಂಭಿಸಿದ ವೆಲ್ ಕಮ್ ಹೋಟೆಲ್ ಶುಕ್ರವಾರ ಉದ್ಘಾಟನೆಯಾಯಿತು.
ಜೊಲ್ಲೆ ಗ್ರೂಪ್‌ನ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, 'ಬೆಳಗಾವಿಯಲ್ಲಿಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಹೈಟೆಕ್ ವ್ಯವಸ್ಥೆ ಒಳಗೊಂಡ ಈ ಹೋಟೆಲ್ ಆರಂಭಿಸಿದ್ದೇವೆ. ಇಲ್ಲಿ ವಿಶೇಷ ಖಾದ್ಯಗಳನ್ನು ಉಣಬಡಿಸಲಾಗುವುದು. ಜತೆಗೆಉತ್ತರ ಕರ್ನಾಟಕದ ಖಾದ್ಯಗಳನ್ನು ಊಟದ ಮೆನುವಿನಲ್ಲಿ ಸೇರಿಸಲಾಗುವುದು' ಎಂದರು.ಯಕ್ಸಂಬಾದಂಥ ಊರಲ್ಲಿ ಬೀರೇಶ್ವರ ಸಹಕಾರಿ ಸೊಸೈಟಿ ಆರಂಭಿಸುವ ಮೂಲಕ ನಾವು ಸಾಮಾಜಿಕ ರಂಗಕ್ಕೆ ಧುಮುಕಿದೆವು.50ರ ಪ್ರಾಯದವರೆಗೆ ನಾನು ಸಹಕಾರಿ ರಂಗಕ್ಕೆ ಸೀಮಿತವಾಗಿದ್ದೆ. ಈಗ ಹೋಟೆಲ್ ಆರಂಭದ ಮೂಲಕ ಖಾಸಗಿ ವಲಯ ಪ್ರವೇಶಿಸಿದ್ದೇವೆ. ಬೆಳಗಾವಿಗೆ ನಮ್ಮ ಸೇವೆಗೆ ವಿಸ್ತರಿಸಿದ್ದೇವೆ' ಎಂದರು.
ಜೊಲ್ಲೆ ಹಾಸ್ಪಿಟಾಲಿಟಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ
ಬಸವಪ್ರಸಾದ ಜೊಲ್ಲೆಮಾತನಾಡಿ, 'ಪ್ರಶಸ್ತವಾದ ಪರಿಸರದಲ್ಲಿ 5 ಎಕರೆ ವಿಸ್ತೀರ್ಣದಲ್ಲಿರುವ ಹೋಟೆಲ್ 116 ಸುಸಜ್ಜಿತ ಕೊಠಡಿಗಳು, ಈಜುಕೊಳ, ಕ್ಲಬ್, ಫಿಟ್ ನೆಸ್ ಸೆಂಟರ್ ಮೊದಲಾದ ಸೌಕರ್ಯ ಹೊಂದಿದೆ
ಬೆಳಗಾವಿಯಲ್ಲಿ ಇಂಥದ್ದೊಂದು ಫೈವ್ ಸ್ಟಾರ್ ಹೋಟೆಲ್ ಆರಂಭಿಸಿರುವುದು ಹೆಮ್ಮೆಯ ಸಂಗತಿ. ಐಟಿಸಿ ಹೋಟೆಲ್ಸ್ ಸಹಯೋಗದಲ್ಲಿ ದೇಶದಲ್ಲಿ ಆರಂಭವಾಗುತ್ತಿರುವ 25ನೇ ವೆಲ್ ಕಮ್ ಹೋಟೆಲ್ ಇದಾಗಿದೆ. ಇಲ್ಲಿಗೆ ಬರುವ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಿ, ಪ್ರವಾಸೋದ್ಯಮ ಬೆಳವಣಿಗೆಗೆ ಶ್ರಮಿಸಲಾಗುವುದು' ಎಂದು ತಿಳಿಸಿದರು.
ಜೊಲ್ಲೆ ಗ್ರೂಪ್ ಸಹಸಂಸ್ಥಾಪಕಿಯೂ ಆಗಿರುವ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, 'ವೀರರಾಣಿ ಚನ್ನಮ್ಮನ ಹುಟ್ಟೂರಿನಲ್ಲಿ ವೆಲ್‌ಕಮ್ ಹೋಟೆಲ್ ಆರಂಭಿಸಿರುವುದು ಅಭಿಮಾನದ ಸಂಗತಿ. ಗೋವಾ, ಮಹಾರಾಷ್ಟ್ರದೊಂದಿಗೆ ಸಂಪರ್ಕ ಹೊಂದಿರುವ ಬೆಳಗಾವಿಗೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರಿಗೆ ಉತ್ತಮ ದರ್ಜೆಯ ಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ' ಎಂದರು.
ವೆಲ್ ಕಮ್ ಹೋಟೆಲ್ ವ್ಯವಸ್ಥಾಪಕ ರಾಹುಲ್ ಕನುಂಗೊ, ಝಬಿನ್ ಎಸ್.ಇತರರಿದ್ದರು.