

ಬೆಂಗಳೂರು: ಮಹಾನಗರದಲ್ಲಿ ಅನಧಿಕೃತ ಜಾಹೀರಾತು ತೆರವಿಗೆ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಒಳಗೊಂಡ ಜಂಟಿ ತಂಡದಿಂದ ಮಂಗಳವಾರ ಮಧ್ಯರಾತ್ರಿಯಿಂದ ಕಾರ್ಯಾಚರಣೆಗೆಯನ್ನು ಆರಂಭಿಸಲಾಗಿದೆ.
ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಅನಧಿಕೃತ ಜಾಹೀರಾತುಗಳಿಗೆ ಕಡಿವಾಣ ಹಾಕಲು ಪಾಲಿಕೆ ಮೊದಲ ಬಾರಿಗೆ ಕಠಿಣ ಕ್ರಮಗಳನ್ನನು ಕೈಗೊಂಡಿದೆ. ಕಳೆದೊಂದು ತಿಂಗಳಿನಿಂದ ಎರಡೂ ಸರ್ಕಾರಿ ಸಂಸ್ಥೆಗಳು ಹಲವು ಸುತ್ತಿನ ಸಭೆಗಳನ್ನು ನಡೆಸಿ ಕಾರ್ಯಾಚರಣೆಯನ್ನು ಅಂತಿಮಗೊಳಿಸಿತ್ತು. ಪ್ರತೀ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂಡವನ್ನು ರಚಿಸಿಕೊಂಡು ನೋಡಲ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಫ್ಲೆಕ್ಸ್, ಬ್ಯಾನರ್ ಹಾಗೂ ಎಲ್ಲ ವಿಧದ ಜಾಹೀರಾತುಗಳನ್ನು ಅನಧಿಕೃತವಾಗಿ ಪ್ರದರ್ಶಿಸಿದ್ದಲ್ಲಿ ಅವುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಇತ್ತೀಚಿಗೆ ಹೊಸ ಜಾಹೀರಾತು ನೀತಿಯ ಕರಡು ಅಧಿಸೂಚನೆ ಹೊರಬಿದ್ದ ಬಳಿಕ ಪಾಲಿಕೆ ಎಚ್ಚೆತ್ತುಕೊಂಡಿದೆ. ಸ್ವತ: ಡಿಸಿಎಂ ಅವರೂ ಸಹ ಅನಧಿಕೃತ ಜಾಹೀರಾತು ತೆರವು ವಿಚಾರದಲ್ಲಿ ಯಾರ ಒತ್ತಡಕ್ಕೂ ಒಳಗಾಗದೆ ಕಾನೂನು ಪ್ರಕಾರ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಇದರನ್ವಯ ಜಂಟಿ ಕಾರ್ಯಾಚರಣೆವನ್ನು ಆರಂಭಿಸಲಾಗಿದೆ.