

ವಿಜಯಪುರ:ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲರು ರೈತರ ಜತೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ರಸಗೊಬ್ಬರ ಮಳಿಗೆಗಳಿವೆ. ಬೆಳೆಗಳಿಗೆ ಯೂರಿಯಾ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಹೀಗಿದ್ದರೂ ನ್ಯಾಯಯುತ ಮಳಿಗೆಗಳಿಗೆ ಸಮರ್ಪಕ ಗೊಬ್ಬರ ಪೂರೈಸದೆ, ಬೇರೆ ಮಳಿಗೆಗಳಿಗೂ ಗೊಬ್ಬರ ಪೂರೈಸುತ್ತಿದ್ದು, ಅವರು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದನ್ನು ಗಮನಿಸಿದರೆ ಇದರಲ್ಲಿ ಅವರೂ ಶಾಮೀಲಾಗಿದ್ದಾರೆಯೇ? ಎಂಬ ಅನುಮಾನ ಮೂಡುತ್ತಿದೆ ಎಂದು ಪ್ರತಿಭಟನೆಕಾರರು ದೂರಿದ್ದಾರೆ.
ಅಲ್ಲದೆ, ಜಂಟಿ ಕೃಷಿ ನಿದೇಶಕರಿಗೆ ರೈತರು ದೂರವಾಣಿ ಮೂಲಕ ಯಾವುದೇ ಮಾಹಿತಿ ಹೇಳಿದರೂ ತಮ್ಮ ಅಧಿಕಾರ ದರ್ಪ ತೋರುತ್ತಿದ್ದಾರೆ. ನ್ಯಾಯಯುತವಾದ ಗೊಬ್ಬರದ ಮಳಿಗೆಯವರು ಪತ್ರ ಬರೆದರೂ ಯಾವುದೇ ಸೂಕ್ತಕ್ರಮಕ್ಕೆ ಮುಂದಾಗುತ್ತಿಲ್ಲ. ಇವರು ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ.
ಕೂಡಲೇ ಸೂಕ್ತ ತನಿಖೆಗೆ ನಡೆಸಿ ಕ್ರಮ ತೆಗೆದುಕೊಂಡು ಅನ್ನದಾತರ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ.ಈ ಬಾರಿ ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ನಾಶವಾಗಿದೆ. ಕೂಡಲೇ ಈ ಬಗ್ಗೆ ಸಮಿೆ ನಡೆಸಿ ಸಂಕಷ್ಟದಲ್ಲಿದ್ದ ರೈತರಿಗೆ ನ್ಯಾಯಾಯುತವಾಗಿ ಬೆಳೆಯ ಪರಿಹಾರ ನೀಡಬೇಕು. ಹಿಂದಿನ ವರ್ಷದ ಬೆಳೆ ವಿಮೆ ಕಟ್ಟಿದ ಹಲವು ರೈತರಿಗೆ ಇನ್ನೂ ಬೆಳೆಯ ವಿಮಾ ಬಂದಿಲ್ಲ. ಹೀಗಾಗಿ ರೈತರು ಆತಂಕಕ್ಕೆ ಒಳಗಾಗಿದ್ದು, ಕೂಡಲೇ ಸರ್ಕಾರದ ಗಮನಕ್ಕೆ ತರಬೇಕು. ತಕ್ಷಣ ಬೆಳೆಯ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ರೈತ ಮುಖಂಡರಾದ ತಮ್ಮಾರಾಯ ಆಸಂಗಿ, ಮಲ್ಲಿಕಾರ್ಜುನ ನಾವದಗಿ, ಶ್ರೀಧರ ಚವ್ಹಾಣ, ಬಸನಗೌಡ ಪಾಟೀಲ, ಗಿರಮಲ್ಲ ಮಸಳಿ, ಮಲಕಪ್ಪ ನಾವದಗಿ, ಹಣಮಂತ ರಜಪೂತ, ಬಸು ಕೈರಾಟ, ರೇವಣಸಿದ್ದ ಕನ್ನೂರ, ನಾಗೇಶ ಕೈರಾಟ ಮತ್ತಿತರರಿದ್ದರು.
ವಿಜಯಪುರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ರೈತರ ಜತಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ವಿಜಯಪುರದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು. ಎಸ್.ಬಿ. ಕೆಂಬೋಗಿ, ತಮ್ಮಾರಾಯ ಆಸಂಗಿ, ಮಲ್ಲಿಕಾರ್ಜುನ ನಾವದಗಿ ಮತ್ತಿತರರಿದ್ದಾರೆ.