

ಅರಸೀಕೆರೆ: ರಿವರ್ಸ್ ಆಪರೇಷನ್ ನಡೆಸುವ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಟಕ್ಕರ್ ನೀಡಿದ್ದಾರೆ.
ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಅಸಮಾಧಾನದ ಸುಳಿವು ಪಡೆದ ಸಂಸದರು, ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದು ಫಲ ನೀಡಿದೆ.
ನಗರ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಸಮೀರ್, ನಗರಸಭೆ ಮಾಜಿ ನಾಮನಿದೇರ್ಶನ ಸದಸ್ಯ ಯೂನಿಸ್, ಅಡ್ಡು, ನವಾಜ್ ಸೇರಿದಂತೆ ಹಲವರು ಮಂಗಳವಾರ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ.
ಬಿರುಸಿನ ಮತಯಾಚನೆ: ನಗರದ ಮಟನ್ ಮಾರ್ಕೆಟ್‌ಗೆ ಹೊಂದಿಕೊಂಡಂತಿರುವ ಅಲ್ಪಸಂಖ್ಯಾತ ಬಾಹುಳ್ಯದ ಹಲವು ಬಡಾವಣೆಗಳಲ್ಲಿ ಮಂಗಳವಾರ ಬಿರುಸಿನ ಮತಯಾಚನೆ ನಡೆಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಊಹಾಪೋಹಗಳಿಗೆ ಕಿವಿಗೊಡದೆ ಮುಸ್ಲಿಂ ಸಮುದಾಯ ಬೆಂಬಲ ನೀಡಬೇಕು. ನಗರ ಒಳಗೊಂಡಂತೆ ತಾಲೂಕಿನ ವಿವಿಧ ಹೋಬಳಿ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಮಸೀದಿಗಳ ಪ್ರಗತಿಪರ ಕೆಲಸಗಳಿಗೆ ಅನುದಾನ ನೀಡಿದ್ದೇನೆ ಎಂದರಲ್ಲದೆ ಪಕ್ಷ, ಜಾತಿ ತಾರತಮ್ಯವಿಲ್ಲದೆ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಭರವಸೆ ನೀಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್, ಡಿ.ಕೆ.ಸಮೀರ್, ಯೂನಿಸ್, ಅಡ್ಡು, ನವಾಜ್ ಸೇರಿದಂತೆ ಹಲವರಿದ್ದರು.