

ಕೊಳ್ಳೇಗಾಲ: ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಸಮಿತಿಯ ಸಭೆ ಅಧ್ಯಕ್ಷ ಷಣ್ಮುಖಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ರೈತ ಸಂಘಕ್ಕೆ ಹೊಸದಾಗಿ ಮಧುವನಹಳ್ಳಿ ಗ್ರಾಮದ ಜಗದೀಶ್, ಮಾದೇಶ್, ಸಿದ್ಧಲಿಂಗಸ್ವಾಮಿ, ದೊಡ್ಡಸಿದ್ದಶೆಟ್ಟಿ ಸೇಪರ್ಡೆಗೊಂಡರು. ನಂತರ ರೈತ ಮುಖಂಡ ಅಣಗಳ್ಳಿ ಬಸವರಾಜು ಮಾತನಾಡಿ, ಸಭೆಯಲ್ಲಿ ರೈತರಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಸಮರ್ಪಕ ವಿದ್ಯುತ್ ನೀಡದಿರುವುದರಿಂದ ಕೃಷಿಗೆ ತೊಂದರೆ ಆಗಿದೆ. ಹಾಗೆಯೇ ಕೆರೆ-ಕಟ್ಟೆಗಳಲ್ಲಿ ಹೂಳು ತೆಗೆಯದಿರುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಯಾವ ರೀತಿಯಲ್ಲಿ ಹೋರಾಟ ನಡೆಸಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದರು.
ರೈತ ಸಂಘದ ತಾಲೂಕು ಕಾರ್ಯದರ್ಶಿ ರಾಮಕೃಷ್ಣ, ಸಹ ಕಾರ್ಯದರ್ಶಿ ಲಕ್ಷ್ಮಣಮೂರ್ತಿ, ವೀರಭದ್ರಸ್ವಾಮಿ, ನಾಗರಾಜು, ಮರಿಸ್ವಾಮಿ, ಶಿವಮೂರ್ತಿ ತೇಂರಬಳ್ಳಿ, ಮಲ್ಲರಾಜು, ಮಾಲಂಗಿ ಬಸವರಾಜು ಮತ್ತಿತರಿದ್ದರು.