ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ: ಉಪ್ಪರಕನಹಳ್ಳಿ ಮುಖಂಡರನ್ನು ಸ್ವಾಗತಿಸಿದ ಸಚಿವ, ಶಾಸಕ

Joined Congress after leaving JDS mandya
Published on

ಮಂಡ್ಯ: ತಾಲೂಕಿನ ಉಪ್ಪರಕನಹಳ್ಳಿ ಗ್ರಾಮದ 20ಕ್ಕೂ ಹೆಚ್ಚು ಮುಖಂಡರು ಜೆಡಿಎಸ್ ತೊರೆದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಗಣಿಗ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಉಪ್ಪರಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಲ್ಲಾಘಟ್ಟ ಭಾಗ್ಯಲಕ್ಷ್ಮೀ, ಸದಸ್ಯೆ ಪೂರ್ಣಿಮಾ, ಡೇರಿ ಮಾಜಿ ಅಧ್ಯಕ್ಷ ಚಲುವೇಗೌಡ, ನಿರ್ದೇಶಕರಾದ ಜವರೇಗೌಡ, ಪುಟ್ಟಸ್ವಾಮಿ,ಪ್ರಕಾಶ್, ವೆಂಕಟಗಿರಿ, ಮರಿಸ್ವಾಮಿಗೌಡ, ಯಾಜಮಾನ್ ಮರೀಗೌಡ ಹಾಗೂ ಮುಖಂಡರಾದ ಕುಮಾರ್, ಸ್ವಾಮಿ, ಕೇಬಲ್ ಬೆಟ್ಟೇಗೌಡ, ನಿಂಗೇಗೌಡ, ನಂಜಪ್ಪ, ಶಂಕರೇಗೌಡ, ತಿಮ್ಮೆಗೌಡ, ವೆಂಕಟರಾಮು, ಕುಮಾರ್, ಕಾಂತರಾಜು, ಗಿರೀಶ್, ಜವರೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಗ್ರಾಮದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉಪ್ಪರಕನಹಳ್ಳಿ ಗ್ರಾಮದ ಹಲವರು ಕಾಂಗ್ರೆಸ್ ಸೇರಿದ್ದಾರೆ. ಹಲವು ವರ್ಷದಿಂದ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕುಂಠಿತವಾಗಿದೆ. ಈ ನಿಟ್ಟಿನಲ್ಲಿ ಹೊಸ ಕಾರ್ಯಕ್ರಮದ ಮೂಲಕ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಾಗುವುದು. ಪಕ್ಷ ಸೇರಿದವರಿಗೂ ಕೂಡ ಮುಂದಿನ ದಿನದಲ್ಲಿ ಅವಕಾಶ ಸಿಗಲಿದೆ. ಇದಲ್ಲದೆ ಇನ್ನು ಹಲವು ಪಕ್ಷದ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net