ಸುಂದರ ಸಮಾಜಕ್ಕೆ ಸಜ್ಜನರ ಸಂಗ ಮಾಡಿ

Join the company of gentlemen for a beautiful society.
Published on

ಜಮಖಂಡಿ:ಇಂದು ಹದಿಹರೆಯದ ಯುವಕರು ದುಶ್ಚಟಗಳ ದಾಸರಾಗಿ ಆರೋಗ್ಯ ಹಾಳು ಮಾಡಿಕೊಂಡು ಕಿರಿಯ ವಯಸ್ಸಿನಲ್ಲಿ ಮರಣ ಹೊಂದುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಇಳಕಲ್ಲ ಗುರುಮಹಾಂತ ಸ್ವಾಮೀಜಿ ಹೇಳಿದರು.ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾಂತ ಜೋಳಿಗೆ ಅನುಷ್ಠಾನ ಸಮಿತಿ, ಎನ್​ಎಸ್​ಎಸ್​ ಟಕ, ಇಕೋ ಕ್ಲಬ್​, ರೆಡ್​ಕ್ರಾಸ್​ ಸಂಸ್ಥೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರೂ ಸಜ್ಜನರ ಸಂಗ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಂಡು ಸುಂದರ ಸಮಾಜ ನಿರ್ಮಾಣ ಮಾಡಬೇಕು. ಮನಗೂಳಿಯ ವೀರತೀಶಾನಂದ ಸ್ವಾಮಿಜಿ ಮಾತನಾಡಿ, ಪ್ರತಿ ವರ್ಷ ವ್ಯಸನಮುಕ್ತ ದಿನ ಆಚರಿಸಿ ಕೇವಲ ಪ್ರಮಾಣ ಮಾಡಿದರೆ ಸಾಲದು. ಅದರಂತೆ ನಡೆಯಬೇಕು ಎಂದರು.ಜಮಖಂಡಿಯ ಮಹಾಂತ ಜೋಳಿಗೆ ಅನುಷ್ಠಾನ ಸಮಿತಿಯ ಎಸ್​.ಎಸ್​. ಗೌಡರ, ಹಣಮಂತ ಗಣಿ, ಉಪನ್ಯಾಸಕರಾದ ಬಿ.ಎಸ್​.ಭಾಗೋಜಿ, ಶ್ರೀಕಾಂತ ಮಾದರ, ಸುನೀಲ ಕೋರೆ, ಸುನೀತಾ ಗುಡ್ಡಿ, ಸುಸ್ಮಿತಾ ಜಯಪ್ಪನವರ, ಸುನೀತಾ ಕಾಂಬಳೆ ಇದ್ದರು. ಉಪನ್ಯಾಸಕಿ ಶ್ರೀದೇವಿ ಪಾಟೀಲ ಪ್ರಾರ್ಥಿಸಿದರು. ಉಪನ್ಯಾಸಕಿ ಸಿ.ಎಸ್​.ಜನಗೊಂಡ ಸ್ವಾಗತಿಸಿದರು. ಡಾ.ಲಿಂಗಾನಂದ ಗವಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಪ್ರತಿಭಾ ನಾಯ್ಕ ನಿರೂಪಿಸಿದರು. ಉಪನ್ಯಾಸಕ ಶ್ರೀಶೈಲ ಜಿಂಜರವಾಡ ವಂದಿಸಿದರು.

ಜಮಖಂಡಿ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವ್ಯಸನಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಇಳಕಲ್ಲ ಗುರುಮಹಾಂತ ಸ್ವಾಮೀಜಿ ಮಾತನಾಡಿದರು. ಮನಗೂಳಿಯ ವೀರತೀಶಾನಂದ ಸ್ವಾಮೀಜಿ, ಎಸ್​.ಎಸ್​. ಗೌಡರ, ಹಣಮಂತ ಗಣಿ, ಡಾ. ಲಿಂಗಾನಂದ ಗವಿಮಠ ಇತರರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net