ಎನ್​ಎಸ್​ಎಸ್​ ಸೇರಿ ದೇಶ ಸೇವೆಮಾಡಿ

Join NSS and serve the country.
ವಿಜಯಪುರ ತಾಲೂಕಿನ ಹಂಚನಾಳ ಪಿಎಚ್​ ಗ್ರಾಮದಲ್ಲಿ ಇಲ್ಲಿನ ಎಸ್​ಬಿ ಕಲಾ ಮತ್ತು ಕೆಸಿಪಿ ವಿಾನ ಮಹಾವಿದ್ಯಾಲಯದ ವತಿಯಿಂದ ಎನ್​ಎಸ್​ಎಸ್​ ಶಿಬಿರ ಆಯೋಜಿಲಾಗಿತ್ತು. ಡಾ. ಆರ್​.ಎಂ. ಮಿರ್ದೆ, ಪ್ರೊ. ರಾಜು ಕಪಾಲಿ, ಡಾ. ಅನಿಲ ನಾಯಕ ಮತ್ತಿತರರಿದ್ದಾರೆ.
Published on

ವಿಜಯಪುರ: ಗಡಿಯಲ್ಲಿ ಸೈನಿಕರು ದೇಶವನ್ನು ಸಂರಸಿದಂತೆ ವಿದ್ಯಾರ್ಥಿಗಳು ಎನ್​ಎಸ್​ಎಸ್​ ಸೇರಿ ಸ್ವಯಂ ಸೇವೆಯ ಮೂಲಕ ದೇಶ ಸೇವೆಗೆ ಮುಂದಾಗುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕಿದೆ ಎಂದು ವಿಜಯಪುರ ತಾಲೂಕು ಎನ್​ಎಸ್​ಎಸ್​ ಪ್ರಭಾರಿ ಸಂಯೋಜನಾಧಿಕಾರಿ ಪ್ರೊ. ರಾಜು ಕಪಾಲಿ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಎಸ್​ಬಿ ಕಲಾ ಮತ್ತು ಕೆಸಿಪಿ ವಿಾನ ಮಹಾವಿದ್ಯಾಲಯ, ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಟಕ&1 ಮತ್ತು ಟಕ&2 ಸಂಯೋಜನೆಯಡಿ ತಾಲೂಕಿನ ಹಂಚನಾಳ ಪಿಎಚ್​ ಗ್ರಾಮದಲ್ಲಿ ವಾರಗಳ ಕಾಲ ಹಮ್ಮಿಕೊಂಡ ಎನ್​ಎಸ್​ಎಸ್​ ಶಿಬಿರಕ್ಕೆ ಭಾನುವಾರ ಅವರು ಚಾಲನೆ ನೀಡಿದರು.

ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಶ್ರಮಿಸಬೇಕು. ವಿದ್ಯಾರ್ಥಿಗಳು ಎನ್​ಎಸ್​ಎಸ್​ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಕೇವಲ ಸ್ವಚ್ಛತೆ ಅಲ್ಲದೆ ಶಿಸ್ತು, ವ್ಯಕ್ತಿತ್ವ ವಿಕಸನ ಹಾಗೂ ಜೀವನದ ಮೌಲ್ಯ ಅರ್ಥೈಸಿಕೊಳ್ಳಲು ಸಹಾಯ ಮಾಡಲಿವೆ ಎಂದರು.

ಪ್ರಾಚಾಯೆರ್ ಡಾ. ಆರ್​.ಎಂ. ಮಿರ್ದೆ ಮಾತನಾಡಿ, ವಿದ್ಯಾರ್ಥಿಗಳು 7 ದಿನಗಳ ವಿಶೇಷ ಶಿಬಿರದ ಮಹತ್ವ ಅರಿತುಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಶಿಬಿರಗಳು ತುಂಬಾ ಸಹಾಯಕಾರಿಯಾಗಿವೆ ಎಂದರು.

ಉಪ ಪ್ರಾಚಾರ್ಯ ಡಾ. ಅನಿಲ ನಾಯಕ ಎನ್​ಎಸ್​ಎಸ್​ ಧ್ಯೇಯ ಮತ್ತು ಉದ್ದೇಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಕೆ.ಜಿ. ಲಮಾಣಿ ಸ್ವಚ್ಛತೆ ಮತ್ತು ಮೊಬೈಲ್​ ಬಳಕೆಯ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

ಮಹಾವಿದ್ಯಾಲಯದ ಐಕ್ಯೂಎಸಿ ನಿರ್ದೇಶಕ ಡಾ. ಪಿ.ಎಸ್​. ಪಾಟೀಲ, ಎನ್​ಎಸ್​ಎಸ್​ ಅಧಿಕಾರಿಗಳಾದ ಡಾ. ಮಿಲನ ರಾಠೋಡ, ಡಾ. ತರನ್ನುಮ ಜಬೀನಖಾನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net