ಸ್ವಚ್ಛತೆ, ನೈರ್ಮಲ್ಯ ಕಾಪಾಡಲು ಕೈಜೋಡಿಸಿ

Join hands to maintain cleanliness and hygiene
Published on

ರಟ್ಟಿಹಳ್ಳಿ: ಪಟ್ಟಣದ ಪ್ರತಿಯೊಂದು ಮನೆ ಮತ್ತು ಅಂಗಡಿಗಳಿಂದ ತಾಜ್ಯ ಹಾಗೂ ಕಸವನ್ನು ವಾಹನಗಳ ಮೂಲಕ ಸಂಗ್ರಹಿಸಿ, ವಿಲೇವಾರಿ ಮಾಡಲಾಗುತ್ತದೆ. ಈ ವಾಹನಗಳಿಗೆ ಮನೆಗಳ ಮಾಲೀಕರು ಮತ್ತು ವ್ಯಾಪರಸ್ಥರು ಸಹಕಾರ ನೀಡಿ ಪಟ್ಟಣದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಕೈಜೋಡಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿಯ ನೂತನ ಕಸ ವಿಲೇವಾರಿ ಆಟೋ ಟಿಪ್ಪರ್​ ವಾಹನಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿ, ಕಸವನ್ನು ರಸ್ತೆ ಬದಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಕದೇ ವಾಹನಗಳಿಗೆ ಹಾಕಬೇಕು ಎಂದರು.

ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ 18 ಲಕ್ಷ ರೂಪಾಯಿ ವೆಚ್ಚದಲ್ಲಿ 3 ಆಟೋ ಟಿಪ್ಪರ್​ಗಳನ್ನು ಖರೀದಿಸಿ, ಕಸ ವಿಲೇವಾರಿಗೆ ಬಳಸಲಾಗುತ್ತಿದೆ ಎಂದರು.

ಆಡಳಿತಾಧಿಕಾರಿ ತಹಸೀಲ್ದಾರ್​ ಕೆ. ಗುರುಬಸವರಾಜ, ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಪಪಂ ಸಿಬ್ಬಂದಿ ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ಸಂತೋಷ ಬಿಳಚಿ, ಮಂಜಪ್ಪ ಸುಣಗಾರ, ಬಸವರಾಜ ಕವಲತ್ತು, ಪಿ.ಆರ್​. ಮಲ್ಲನಗೌಡ್ರ, ಮಂಜಪ್ಪ ಚಲವಾದಿ, ಅನುರಾಧ ಸುಣಗಾರ, ಅನುಪಮ ಸೂರ್ಯವಂಶಿ, ನಿಖಿಳ್​ ಅರ್ಕಾಚಾರಿ, ವೀರೇಶ ದ್ಯಾವಕ್ಕಳವರ, ಬಸವರಾಜ ಕಟ್ಟೇಕಾರ, ಬಸವರಾಜ ಹಿರೇಮಠ ಮತ್ತು ಪೌರ ಕಾಮಿರ್ಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net