

ಇಂಡಿ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಎಲ್ಲರೂ ಕೈ ಜೋಡಿಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಕೊಟ್ಟೆಪ್ಪ ಕಾಂಬಳೆ ಹೇಳಿದರು.
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಜೂ. 12 ರಂದು ಬಾಲ ಕಾರ್ಮಿಕ ವಿರೋಧಿ ದಿನ ಆಚರಿಸಲಾಗುತ್ತಿದೆ. ಬಾಲಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವುದೇ ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ನ್ಯಾಯವಾದಿ ಡಿ.ವೈ. ಮೇಡೆಗಾರ ಮಾತನಾಡಿ, ಮಗುವಿನ ವಯಸ್ಸು, ದೈಹಿಕ ಅಥವಾ ಮಾನಸಿಕ ಸಾಮರ್ಥ್ಯಕ್ಕೆ ಸೂಕ್ತವಲ್ಲದ ಕೆಲಸವನ್ನು ಬಾಲ ಕಾರ್ಮಿಕ ಪದ್ಧತಿ ಎಂದು ಹೇಳಲಾಗುತ್ತಿದೆ. 14 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಸಂಘ-ಸಂಸ್ಥೆ, ವೈಯಕ್ತಿಕವಾಗಿ ಯಾರೂ ಕೆಲಸಕ್ಕಾಗಿ ಬಳಸಿಕೊಳ್ಳಬಾರದು ಎಂದು ತಿಳಿಸಿದರು.
ಕಿರಿಯ ದಿವಾಣಿ ನ್ಯಾಯಾಧೀಶ ಸುನಿಲ್ ಕುಮಾರ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ವಿಕಾಸ ದಳವಾಯಿ, ನ್ಯಾಯವಾದಿಗಳಾದ ಎ.ಎ. ಗಜಾಕೊಶ, ಎನ್.ಕೆ. ನಾಡಪುರೊಹಿತ, ಎಸ್.ಆರ್. ಬಿರಾದಾರ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಖಿ ಕಟ್ಟಿಮನಿ, ಐ.ಕೆ. ಗಚ್ಚಿನಮಾಲ, ಮಲ್ಲೇಶ್ ಯಂಬತ್ನಾಳ, ಕಾರ್ಮಿಕ ಇಲಾಖೆ ದತ್ತು ದೇವರಮನಿ ಭಾಗವಹಿಸಿದ್ದರು.