ಹಸಿರು ಧಾರವಾಡ ನಿರ್ಮಿಸಲು ಕೈ ಜೋಡಿಸಿ

web 4
Published on

ಧಾರವಾಡ: ಹಸಿರಿಗೆ ಹೆಸರಾದ ಧಾರವಾಡದಲ್ಲಿಂದು ಮರ- ಗಿಡಗಳ ಕೊರತೆ ಕಾಣುತ್ತಿದೆ. ಧಾರವಾಡದ ಹಸಿರೀಕರಣ ಹೆಚ್ಚಿಸಲು ಜು. ೧ರಿಂದ ೭ರವರೆಗೆ ಜಿಲ್ಲಾ ಮಟ್ಟದ ವನಮಹೋತ್ಸವ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಬೀಜ ಉಂಡೆಗಳ ಬಿತ್ತನೆ ಮೂಲಕ ಕೋಟಿ ವೃಕ್ಷ ಅಭಿಯಾನ ಆರಂಭಿಸಲಾಗಿದೆ. ಹಸಿರು ಧಾರವಾಡ ನಿರ್ಮಿಸಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವಿನಂತಿಸಿದರು.
ಜಿಲ್ಲಾಡಳಿತ, ಅರಣ್ಯ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಳಿಯಾಳ ರಸ್ತೆಯ ಉನ್ನತ ಶಿಕ್ಷಣ ಅಕಾಡೆಮಿ ಸಂಕೀರ್ಣದ ಆವರಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ವನಮಹೋತ್ಸವ ಸಪ್ತಾಹ ಹಾಗೂ ಕೋಟಿ ವೃಕ್ಷ ಅಭಿಯಾನದ ಉದ್ಘಾಟಿಸಿ ಅವರು ಮಾತನಾಡಿದರು.
ಅಽಕಾರಿಗಳು ಅರಣ್ಯ ಹೆಚ್ವಿಸಲು ಅಗತ್ಯ ಯೋಜನೆ ರೂಪಿಸಬೇಕು. ಜಮೀನು ಲಭ್ಯತೆಯ ಮೇಲೆ ಸಸಿಗಳನ್ನು ನೆಡಲು ಶಿಪಾರಸು ಮಾಡಬೇಕು. ಎಲ್ಲರೂ ಸೇರಿ ಮುಂದಿನ ವರ್ಷ ಕನಿಷ್ಠ ೧೦ ಲಕ್ಷ ಸಸಿಗಳನ್ನು ನೆಟ್ಟು ಸಂರಕ್ಷಿಸೋಣ ಎಂದರು.
ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾಲೇಜು ವಿದ್ಯಾರ್ಥಿನಿ ಕೀರ್ತಿ ನರಗುಂದ ಕೋಟಿ ವೃಕ್ಷ ಅಭಿಯಾನದ ಪ್ರತಿಜ್ಞಾವಿಽ ಬೋಽಸಿದರು.
ಜಿಲ್ಲಾಽಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ., ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಽಕಾರಿ ಡಿ. ಯತೀಶ ಕುಮಾರ, ಕವಿವಿ ಕುಲಸಚಿವ ಯಶಪಾಲ್ ಕ್ಷೀರಸಾಗರ, ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ, ಉಪ ಅರಣ್ಯ ಸಂರಕ್ಷಣಾಽಕಾರಿ ವಿವೇಕ ಕವರಿ, ನೇಚರ್ ಫಸ್ಟ್ ಇಕೋ ವಿಲೇಜ್ ಮುಖ್ಯಸ್ಥ ಪಿ.ವಿ. ಹಿರೇಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net