

ಎನ್.ಆರ್.ಪುರ: ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈ ಜೋಡಿಸೋಣ ಎಂದು ಸಾಹಿತಿ ಮೀನಾಕ್ಷಿ ಕಾಂತರಾಜ್ ಹೇಳಿದರು.
ಗುರುವಾರ ಹೊನ್ನೇಕೊಡಿಗೆ ಸರ್ಕಾರಿ ಶಾಲೆಯಲ್ಲಿ ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿ, ನಡವಳಿಕೆಗಳು ಕಾಲ ಬದಲಾದಂತೆ ಬದಲಾಗುತ್ತವೆ. ಒಳ್ಳೆಯದರ ಕಡೆಗೆ ಗಮನ ನೀಡಿದರೆ ಉತ್ತಮ ಪ್ರತಿಫಲ ಸಿಗುತ್ತದೆ ಎಂದರು.
ಎಎಸ್‌ಐ ನಟರಾಜ್ ಮಾತನಾಡಿ, ಕಾನೂನಿನ ವಿರುದ್ಧ್ದವಾಗಿ ನಡೆದರೆ ಅಪರಾಧವಾಗುತ್ತದೆ. ವಾಹನ ಚಲಾಯಿಸುವಾಗ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡಿರಬೇಕು ಎಂದರು.
ಪೇದೆ ನಿತ್ಯಶ್ರೀ ಮಾತನಾಡಿ, ವಾಟ್ಸ್‌ಆ್ಯಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವಿಚಾರಗಳನ್ನು, ಡೆಬಿಟ್ ಕಾರ್ಡ್, ಪಿನ್‌ಕೋಡ್ ತಿಳಿಸಬಾರದು. ಪಾಸ್‌ವರ್ಡ್‌ನ್ನು ಆಗಾಗ ಬದಲಾಯಿಸುತ್ತಿರಬೇಕು ಎಂದು ಸಲಹೆ ನೀಡಿದರು.
ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಸಚಿನ್ ಮಾತನಾಡಿ, ಅರಣ್ಯವನ್ನು ಕಾಪಾಡುವುದೇ ಅರಣ್ಯ ಇಲಾಖೆಯ ಮುಖ್ಯ ಉದ್ದೇಶ. ಪ್ರಕೃತಿ ಉಳಿಸಲು ಅರಣ್ಯ ಇಲಾಖೆ ಜತೆಗೆ ಸಾರ್ವಜನಿಕರು, ಯುವಜನರು, ರೈತರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಹೊನ್ನೇಕೊಡಿಗೆ ವಿದ್ಯಾಗಣಪತಿ ಸಂಘದ ಅಧ್ಯಕ್ಷ ಹೂವಣ್ಣ ಗೌಡ, ಹೊನ್ನೇಕೊಡಿಗೆ ವಿದ್ಯಾಗಣಪತಿ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕೆ.ಶಶಿಧರ್, ಪ್ರೊ. ರುಖಿಯತ್, ಪ್ರೊ. ಎಚ್.ಎಂ.ವಿಶ್ವನಾಥ್, ಪ್ರೊ.ದಿವಾಕರ್ ನಾಯಕ್, ಎಚ್.ಎಸ್.ಜಯಶ್ರೀ ಇದ್ದರು.