ದೇವಾಲಯ ನಿರ್ಮಾಣಕ್ಕೆ ಕೈ ಜೋಡಿಸಿ

FotoJet 333333
Published on

ಶ್ರೀನಿವಾಸಪುರ: ದೇವಾಲಯ ನೆಮ್ಮದಿ, ಶಾಂತಿ ನೀಡುವ ತಾಣವಾಗಿದ್ದು, ನಿರ್ವಾಣ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಹೇಳಿದರು.

ಪಟ್ಟಣದ ಸಂತೆ ಮೈದಾನದಲ್ಲಿ ತಾಲೂಕು ನಂದಗೋಕುಲ ಯಾದವ, ಗೊಲ್ಲ ಕ್ಷೇವಾಭಿವೃದ್ಧಿ ಟ್ರಸ್ಟ್ ಹಾಗೂ ನಂದಕೋಕುಲ ಕೃಷ್ಣ ದೇವಾಲಯ ಸೇವಾ ಟ್ರಸ್ಟ್‌ನಿಂದ ಭಾನುವಾರ ಆಯೊಜಿಸಿದ್ದ ಕೃಷ್ಣ ದೇವಾಲಯ ನಿರ್ವಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ವಾತನಾಡಿದ ಅವರು, ಕೃಷ್ಣ ಭಾರತೀಯ ಪರಂಪರೆಯ ಆರಾಧ್ಯ ದೈವ ಎಂದು ಹೇಳಿದರು.

ಜಿಲ್ಲಾ ಸರ್ಕಾರಿ ನೌಕರರ ಸಂದ ವಾಜಿ ಅಧ್ಯಕ್ಷ ಜಿ.ಸುರೇಶಬಾಬು ವಾತನಾಡಿ, ಗೊಲ್ಲ ಸಮುದಾಯ ದೇವಾಲಯ ನಿರ್ವಾಣಕ್ಕೆ ಸಾಂಕ ಪ್ರಯತ್ನ ವಾಡಬೇಕು. ದೇವಾಲಯ ನಿರ್ವಾಣವು ಸವಾಜದಲ್ಲಿ ಸದ್ಗುಣ ಬೆಳೆಯಲು ಸಹಕಾರಿಯಾಗುತ್ತದೆ. ಯಾದವ ಸಮುದಾಯದ ಮುಖಂಡರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕೃಷ್ಣ ದೇವಾಲಯ ಹಾಗೂ ಸಮುದಾಯ ಭವನ ನಿರ್ವಾಣಕ್ಕೆ ಪ್ರಯತ್ನ ವಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಜಮೀನು ಮಂಜೂರು ವಾಡಬೇಕು ಎಂದು ಮನವಿ ವಾಡಿದರು.

ತಾಲೂಕು ನಂದಗೋಕುಲ ಯಾದವ, ಗೊಲ್ಲ ಕ್ಷೇವಾಭಿವೃದ್ಧಿ ಟ್ರಸ್ಟ್ ಖಜಾಂಚಿ ಅಪ್ಪೂರು ಬಾಲಜಿ ವಾತನಾಡಿ, ದೇವಾಲಯ ನಿರ್ವಾಣ ಪಕ್ಷಾತೀತವಾಗಿ ನಡೆಯುತ್ತಿದ್ದು, ನಿಮ್ಮ ಕೈಲಾದ ನೆರವು ನೀಡಬೇಕು ಎಂದರು.

ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ವಾತನಾಡಿ, ಪಟ್ಟಣಕ್ಕೆ ಕೃಷ್ಣ ದೇವಾಲಯ ಹೊಸ ಸೇರ್ಪಡೆಯಾಗಲಿದೆ. ದೇವಾಲಯ ನಿರ್ವಾಣಕ್ಕೆ ಪೂರಕವಾದ ನೆರವು ನೀಡಲಾವುದು ಎಂದು ಭರವಸೆ ನೀಡಿದರು.

ನಂದಗೋಕುಲ ಯಾದವ ಗೊಲ್ಲ ಕ್ಷೇವಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ವಿ.ಶ್ರೀನಿವಾಸ್ ವಾತನಾಡಿ, ತಾಲೂಕಿನಲ್ಲಿ ಯಾದವ ಅಥವಾ ಗೊಲ್ಲ ಸಮುದಾಯ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದೆ. ರಾಜಕೀಯ ಭಿನ್ನಾಭಿಪ್ರಾಯ ಮರೆತು ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ನೆರವು ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಅಪ್ಪೂರು ನಾರಾಯಣಸ್ವಾಮಿ ಕುಟುಂಬದವರು ದೇವಾಲಯ ನಿರ್ವಾಣಕ್ಕೆ ರೂ.2.50 ಲಕ್ಷ ರೂ. ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ರಾಮಪ್ಪ, ಅಪ್ಪೂರು ನಾರಾಯಣಸ್ವಾಮಿ, ಅಪೋರು ರಾಜು, ಸೋಮಣ್ಣ, ಜಯರಾಮ್, ವಾಸು, ವೆಂಕಟೇಶಬಾಬು, ಸತ್ಯಣ್ಣ ಹಾಗೂ ಸಮುದಾಯದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net