

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾಥಿರ್ಗಳು ಪಠ್ಯದ ಜತೆಗೆ ಉನ್ನತ ಶಿಬಿರಗಳನ್ನು ಪಡೆದು ತಮ್ಮ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಒಳ್ಳೆ ಸೇವೆ ಮಾಡಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಉದ್ಯಮಿ ಅರುಣ ಹೆಬ್ಳೀಕರ ಹೇಳಿದರು.
ನಗರದ ಜೆಎಸ್ಎಸ್ನ ಕೆ.ಎಚ್. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾಥಿರ್ಗಳಿಗೆ ಸಾಕಷ್ಟು ಅವಕಾಶಗಳಿವೆ. ಅದಕ್ಕೆ ತಕ್ಕಂತೆ ಕೌಶಲಗಳನ್ನು ಅಳವಡಿಸಿಕೊಂಡು ಅವಕಾಶದ ಪ್ರಯೋಜನ ಪಡೆಯಬೇಕು. ಇದರ ಜತೆಗೆ ಜೀವನದಲ್ಲಿ ಉತ್ತಮ ಸಂಸ್ಕಾರ ಬೆಳೆಸಿಕೊಂಡು ಹಿರಿಯರಿಗೆ ಗೌರವ ನೀಡಬೇಕು ಎಂದರು.
ಸರೋಜಿನಿ ಯರೇಶೀಮಿ ಮಾತನಾಡಿ, ಒಳ್ಳೆಯ ಜ್ಞಾನ, ಸಂಸ್ಕಾರ ಪಡೆದು ಜಗತ್ತಿನ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಾಚಾಯೆರ್ ವೇದಾವತಿ ತಿವಾರಿ ಅಧ್ಯಕ್ಷತೆ ವಹಿಸಿದ್ದರು.
ಸಂಯೋಜನಾಧಿಕಾರಿ ವಿ.ಕೆ. ಭರಣಿ, ವಿದ್ಯಾಥಿರ್ ಕಲ್ಯಾಣ ಅಧಿಕಾರಿ ವೆಂಕಟೇಶ ಪೂಜಾರ, ಸಂಸ್ಥೆ ಸಿಬ್ಬಂದಿ, ವಿದ್ಯಾಥಿರ್ಗಳು, ಇತರರು ಇದ್ದರು.
ವಸಂತ ಐಹೊಳೆ ಸ್ವಾಗತಿಸಿದರು. ಮಲ್ಲಿಕಾರ್ಜುನಪ್ಪ ವಾಷಿರ್ಕ ವರದಿ ವಾಚಿಸಿದರು. ಜಯಶ್ರೀ ಬಂಕದಮನಿ ನಿರೂಪಿಸಿದರು. ಮಂಜುನಾಥ ಗಜಕೋಶ ವಂದಿಸಿದರು. ನಂತರ ವಿದ್ಯಾಥಿರ್ಗಳಿಂದ ವಿವಿಧ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು.