

ನಾಪೋಕ್ಲು: ಸದಸ್ಯರು ದವಸ ಭಂಡಾರದ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಂಘದ ಅಧ್ಯಕ್ಷ ಕಂಗಾಂಡ ಜಾಲಿ ಪೂವಪ್ಪ ಮನವಿ ಮಾಡಿದರು.
ಶನಿವಾರ ದವಸ ಭಂಡಾರದ ಕಟ್ಟಡದಲ್ಲಿ ಆಯೋಜಿಸಿದ್ದ ನಾಪೋಕ್ಲು ಧವಸ ಭಂಡಾರದ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ದವಸ ಭಂಡಾರದ ಅಭಿವೃದ್ಧಿಗೆ ಸುದೀರ್ಘವಾಗಿ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಚರ್ಚೆಯಲ್ಲಿ ಅರೆಯಡ ಅಶೋಕ್, ಕೊಂಬಂಡ ಗಣೇಶ್, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಸಿ.ಎಸ್.ಜೋಯಪ್ಪ, ಬಿ.ಸಿ.ಕಾವೇರಪ್ಪ, ಕುಲ್ಲೇಟಿರ ದೇವಯ್ಯ ಸಲಹೆ ಸೂಚನೆಗಳನ್ನು ನೀಡಿದರು.
ಉಪಾಧ್ಯಕ್ಷ ಶಿವಚಾಳಿಯಂಡ ಬೋಪಣ್ಣ, ನಿರ್ದೇಶಕರಾದ ಶಿವಚಾಳಿಯಂಡ ಸೋಮಯ್ಯ, ಕುಲ್ಲೇಟ್ಟೀರ ತಮ್ಮಯ್ಯ, ಅರೆಯಡ ವಿನೋದ್, ಬೊಪ್ಪಂಡ ಕಾಳಪ್ಪ, ಪಾಡಿಯಮ್ಮಂಡ ಮಹೇಶ್, ಅಮ್ಮಂಡ ಅಶೋಕ್, ಅಜ್ಜೇಟ್ಟೀರ ರಾಣಿ ಪಳಂಗಪ್ಪ, ಶಿವಚಾಳಿಯಂಡ ಸುಬ್ಬಮ್ಮ, ಎಚ್.ಎ.ಬೊಳ್ಳು ಸುಬ್ಬಮ್ಮ ಉಪಸ್ಥಿತರಿದ್ದರು.