ಗ್ಯಾರಂಟಿ ಯೋಜನೆ ಯಶಸ್ವಿಗೆ ಕೈ ಜೋಡಿಸಿ

11sri-1
Published on

ಶೃಂಗೇರಿ: ಸಮಾಜದ ಕಟ್ಟಕಡೆಯ ಜನರಿಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಸವಲತ್ತುಗಳನ್ನು ತಲುಪಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕೆ ಸದಸ್ಯರು ಕೈಜೋಡಿಸಬೇಕು ಎಂದು ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಾನಂದಸ್ವಾಮಿ ತಿಳಿಸಿದರು.

ತಾಪಂ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಬೇರೆ ದೇಶಗಳಲ್ಲಿ ಜಾರಿಗೆ ಇರುವ ಯೋಜನೆಗಳನ್ನು ಸರ್ಕಾರದ ಜಾರಿಗೆ ತಂದಿದ್ದು ಇದು ಬಡವರಿಗೆ ಸಾಕಷ್ಟು ಉಪಯೋಗಕ್ಕೆ ಬಂದಿದೆ. ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲೂ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಕ್ಷೇತ್ರದಲ್ಲಿ 41,266 ಮಹಿಳೆಯರು ಗೃಹಲಕ್ಷ್ಮೀ, 7,170 ಅನ್ನಭಾಗ್ಯ, 10,197 ಗೃಹಜ್ಯೋತಿ ಯೋಜನೆ ಲಾನುಭವಿಗಳಿದ್ದಾರೆ. ತಾಲೂಕಿನ 54 ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ ಎಂದರು.

ತಾಲೂಕು ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ರಾಜು ಕೊಡೂರು ಮಾತನಾಡಿ,ಚುನವಣಾ ಸಂದರ್ಭದಲ್ಲಿ ಸರ್ಕಾರದ ನೀಡಿದ ಮಾತಿನಂತೆ ನಡೆದುಕೊಂಡಿದೆ. ಮಹಿಳೆಯರು ಪ್ರತಿ ತಿಂಗಳು 2000 ರೂ.ಪಡೆದು ಅರ್ಥಿಕವಾಗಿ ಸಬಲರಾಗಿದ್ದಾರೆ. ಜಿಲ್ಲೆಯಲ್ಲಿ ಶಕ್ತಿಯೋಜನೆಯಡಿ ಸುಮಾರು 30,200 ಮಹಿಳೆಯರು ಪಯಣಿಸುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೂ ತಲುಪಿಸಬೇಕು ಎಂದರು.

ಇಒ ಸುದೀಪ್, ಪಪಂ ಅಧ್ಯಕ್ಷ ವೇಣುಗೋಪಾಲ್, ಎನ್.ಆರ್.ಪುರ ಯೋಜನೆ ಪ್ರಾಧಿಕಾರದ ಅಧ್ಯಕ್ಷೆ ಜಯಮ್ಮ, ಸದಸ್ಯರಾದ ಚಂದ್ರಮತಿ ತಿಮ್ಮಪ್ಪ, ಕಿರಣ್,ಅರುಣ್ ಕುಮಾರ್, ಇಂದ್ರಜಿತ್, ದೇವೇಂದ್ರ ಕಾವಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net