ಮಂಡ್ಯಗೆ ನೂತನ ಸಹಾಯಕ ಔಷಧ ನಿಯಂತ್ರಕ; ಎಮ್​ಡಿಸಿಡಿಒ ಪದಾಧಿಕಾರಿಗಳಿಂದ ಸನ್ಮಾನ

ADC Johar
Published on

ಮಂಡ್ಯ: ಕೊಪ್ಪಳ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ಮಂಡ್ಯ ಜಿಲ್ಲೆಗೆ ವರ್ಗಾವಣೆಗೊಂಡಿರುವ ನೂತನ ಸಹಾಯಕ ಔಷಧ ನಿಯಂತ್ರಕ (ಎಡಿಸಿ) ಜೋಹರ್ ಕಾಲೀದ್ ಅಹಮದ್ ಅವರನ್ನು ಮಂಡ್ಯ ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕ ಸಂಸ್ಥೆ (ಎಮ್​ಡಿಸಿಡಿಒ) ಅಧ್ಯಕ್ಷ ಬಿ.ಲೋಕೇಶ್ ಹಾಗೂ ಎಲ್ಲ ಪದಾಧಿಕಾರಿಗಳು ಭೇಟಿ ಮಾಡಿ ಸನ್ಮಾನಿಸುವ ಮೂಲಕ ಜಿಲ್ಲೆಗೆ ಆಹ್ವಾನಿಸಿಕೊಂಡರು.

ಎಮ್​ಡಿಸಿಡಿಒ ಅಧ್ಯಕ್ಷ ಬಿ.ಲೋಕೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಔಷಧ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ವ್ಯಾಪಾರ ವಹಿವಾಟಿನ ಬಗ್ಗೆ ನೂತನ ಸಹಾಯಕ ಔಷಧ ನಿಯಂತ್ರಕರಿಗೆ ಸಂಕ್ಷಿಪ್ತವಾಗಿ ವಿವರಿಸಿದರು. ಇದೇ ಸಂದರ್ಭದಲ್ಲಿ ನೂತನ ಎಡಿಸಿ ಅವರನ್ನು ಸನ್ಮಾನಿಸಲಾಯಿತು.

ಔಷಧ ವ್ಯಾಪಾರಿಗಳು ಹಾಗೂ ಔಷಧ ನಿಯಂತ್ರಣ ಇಲಾಖೆ ಒಂದೇ ಕುಟುಂಬವಿದ್ದಂತೆ, ಸರ್ಕಾರದ ಹಾಗೂ ಇಲಾಖೆಯ ಅಧಿನಿಯಮದಂತೆ ಎಲ್ಲಾ ಕಾರ್ಯಗಳು ನಡೆದುಕೊಂಡು ಹೋಗುತ್ತವೆ, ನಿಮ್ಮೆಲ್ಲರ ಜೊತೆ ನಮ್ಮ ಇಲಾಖೆ ಬೆನ್ನೆಲುಬಾಗಿರುತ್ತದೆ, ಎಲ್ಲರೂ ಒಟ್ಟಾಗಿ ಕರ್ತವ್ಯ ನಿರ್ವಹಿಸೋಣ ಎಂದು ಜೋಹರ್ ಕಾಲೀದ್ ಅಹಮದ್ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಸಲಹೆಗಾರಾದ ಪ್ರಭಾಕರ್, ರಾಜಶೇಖರ್, ಕೃಷ್ಣೇಗೌಡ, ಮಹೇಶ್, ವೈಷ್ಣವಿ ಮಂಜುನಾಥ್, ಸುರೇಶ್, ಬೋರೇಗೌಡ, ಸುರೇಶ್ ಕಾರಂತ್, ನಂಜೇಗೌಡ ಹಾಗೂ ಎಮ್​ಡಿಸಿಡಿಒನ ಇತರ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net