ಪುತ್ತೂರು: ನಾಥಪಂಥೀಯ ಜೋಗಿ ಸಮಾಜ ಸುಧಾರಕ ಸಂಘದ ನಾಲ್ಕನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವ ನರಿಮೊಗರು ಮುಗೇರಡ್ಕದಲ್ಲಿ ಆ.27ರಂದು 9ಗಂಟೆಯಿಂದ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮೋನಪ್ಪ ಪುರುಷ ಮುಗೇರಡ್ಕ ಹೇಳಿದರು.
ಪುತ್ತೂರು, ಕಡಬ, ಬೆಳ್ತಂಗಡಿ,ಸುಳ್ಯ ಭಾಗದಲ್ಲಿ ಸಂಘ ಕಾರ್ಯಾಚರಿಸುತ್ತಿದ್ದು, ರಾಜ್ಯದ ಎಲ್ಲಾ ಭಾಗದ ಸಮಾಜ ಬಾಂಧವರು ಕ್ರೀಡಾಕೂಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು. ನಿಧಿಶೋಧ, ಓಟ, ಹಗ್ಗ ಜಗ್ಗಾಟ, ವಾಲೆಬಾಲ್, ತ್ರೋಬಾಲ್, ಮಡಕೆಒಡೆಯುವುದು ಮಹಿಳೆಯರು, ಪುರುಷರು, ಮಕ್ಕಳ ವಿಭಾಗದಲ್ಲಿ ನಡೆಯಲಿದೆ. ಸಾಯಂಕಾಲ 4.30ಕ್ಕೆ ಕ್ರೀಡಾಕೂಟದ ಸಮಾರೋಪ ನಡೆಯಲಿದೆ ಎಂದು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಸಂಚಾಲಕ ದಯಾನಂದ ಮುಗೇರಡ್ಕ, ಸದಸ್ಯರಾದ ಉಮೇಶ್ ಪುರುಷರಕಟ್ಟೆ, ಹರಿಶ್ಚಂದ್ರ, ನವೀನ್ ಜೋಗಿ ಉಪಸ್ಥಿತರಿದ್ದರು.