ಮರಗಮ್ಮ ದೇವಸ್ಥಾನಕ್ಕೆ ಅನುದಾನ ಮಂಜೂರಿಸಿ, ಸಂಸದ ರಮೇಶ ಜಿಗಜಿಣಗಿಗೆ ಜೋಗಿ ಸಮಾಜದಿಂದ ಮನವಿ

JOGI SAMAJA MANAVI
ವಿಜಯಪುರ ನಗರದ ಸಂಸದರ ಕಚೇರಿಯಲ್ಲಿ ಜೋಗಿ ಸಮಾಜದ ಮುಖಂಡರು ಸಂಸದ ರಮೇಶ ಜಿಗಜಿಣಗಿಗೆ ಮನವಿ ಸಲ್ಲಿಸಿದರು. ಭಗವಾನ ಕಾಸಾರ, ತುಕಾರಾಮ ಹಿಂಗಮೊರೆ, ದೊಂಡಿಬಾ ಲೋಣಾರಿ ಮತ್ತಿತರರಿದ್ದಾರೆ.
Published on

ವಿಜಯಪುರ: ಹಿಂದುಳಿದ ವರ್ಗ ಜೋಗಿ ಸಮಾಜದ ಶ್ರೀ ಮರಗಮ್ಮ ದೇವಸ್ಥಾನ ಜೀರ್ಣೋದ್ದಾರಕ್ಕೆ ಅನುದಾನ ನೀಡಲು ಆಗ್ರಹಿಸಿ ಸಮಾಜದ ಮುಖಂಡರು ಸಂಸದ ರಮೇಶ ಜಿಗಜಿಣಗಿಗೆ ಗುರುವಾರ ಮನವಿ ಸಲ್ಲಿಸಿದರು.

ಇಲ್ಲಿನ ಹಳೆಯ ಪ್ರವಾಸಿ ಮಂದಿರದಲ್ಲಿರುವ ಸಂಸದರ ಕಚೇರಿಯಲ್ಲಿ ಮನವಿ ಸಲ್ಲಿಸಿದ ಜೋಗಿ ಸಮಾಜ ಸಂಘದ ಅಧ್ಯಕ್ಷ ಭಗವಾನ ಕಾಸಾರ ಮಾತನಾಡಿ, ಜೋಗಿ ಸಮಾಜ ಅತ್ಯಂತ ಹಿಂದುಳಿದಿರುವಂಥದ್ದು. ಈ ಸಮಾಜದ ಶ್ರೀ ಮರಗಮ್ಮ ದೇವಸ್ಥಾನ ಬಹಳ ಪುರಾತನ ಕಾಲದ್ದಾಗಿದೆ. ಶಿಥಿಲಗೊಂಡಿರುವ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ರೂ.10 ಲಕ್ಷ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ಮುಖಂಡರಾದ ತುಕಾರಾಮ ಹಿಂಗಮೊರೆ, ದೊಂಡಿಬಾ ಲೋಣಾರಿ, ನಾನಾ ಕಾಸಾರ, ಏಕನಾಥ ಹಿಂಗಮೊರೆ, ಅಶೋಕ ಹಿಂಗಮೊರೆ, ರಮೇಶ ಹಿಂಗಮೊರೆ, ಜಗದೀಶ ಕಾಸಾರ, ರಾಜು ಸಾಳ್ಳಿ, ಗಿಡ್ಡುನಾಥ ಲೋಣಾರಿ, ಗೋರಕ ಲೋಣಾರಿ ಮತ್ತಿರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net