ಮಳೆಗಾಗಿ ಜೋಗತಿಯರ ಜೋಕುಮಾರನ ಆರಾಧನೆ

28 ಎಸ್ಕೆಪಿ 3
ಮಳೆಯನ್ನು ಕರೆಯಲು ಜೋಕುಮಾರಸ್ವಾಮಿಯನ್ನು ಬಿದಿರಿನ ಬುಟ್ಟಿಯೊಂದಿಗೆ ಮನೆ ತಂದಿರುವ ಜೋಗತಿಯರು.
Published on

ಶಿಕಾರಿಪುರ: ಮಳೆ ಬಾರದಿದ್ದಾಗ ನಮ್ಮ ಹಿರಿಯರು ಬೆಟ್ಟದ ಬಸವಣ್ಣ, ಊರ ದೇವರಿಗೆ ಪರ್ವ ಮಾಡುವುದು, ಕ್ಷೇತ್ರಾಽಪತಿಗೆ ವಿಶೇಷ ಪೂಜೆ, ಅಭಿಷೇಕ, ಕಪ್ಪೆಗಳ ಮದುವೆ ಮಾಡುತ್ತಾರೆ. ಜತೆಗೆ ಒಂದಷ್ಟು ಜೋಗತಿಯರು ಜೋಕುಮಾರನನ್ನು ತೆಗೆದುಕೊಂಡು ಬಿದಿರಿನ ಬುಟ್ಟಿಯಲ್ಲಿ ತಂದು ಮನೆ ಮುಂದಿಳಿಸಿ ಜೋಕುಮಾರನ ಹಾಡು ಹಾಡುತ್ತಾರೆ. ನಂತರ ಜೋಕುಮಾರನಿಗೆ ಬೆಣ್ಣೆ, ಬೇಳೆ, ಬೆಲ್ಲ, ಅಕ್ಕಿ ಸೇರಿ ಹಣವನ್ನು ತೆಗೆದುಕೊಂಡು ಹೋಗುತ್ತಾರೆ.
ಬಯಲುಸೀಮೆಯಲ್ಲಿ ಈ ರೀತಿಯ ಆಚರಣೆಗಳು ಹೆಚ್ಚಾಗಿ ಕಾಣಸಿಗುತ್ತವೆ. ಶಿಕಾರಿಪುರವೂ ಬಯಲು ನಾಡಿಗೆ ಹೊಂದಿಕೊAಡಿರುವುದರಿAದ ಹಾವೇರಿ ಜಿ¯್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ಮುಂತಾದ ಗ್ರಾಮಗಳಿಂದ ಬಂದು ಮಳೆರಾಯನನ್ನು ಕರೆಯುತ್ತಾರೆ. ಈ ವರ್ಷ ಮಳೆ ಇಲ್ಲದೆ ಬರಗಾಲ ಆವರಿಸಿದೆ. ಹಾಗಾಗಿ ಹಳ್ಳಿಗಳ ಪ್ರತಿ ಮನೆಯಲ್ಲೂ ಜೋಕುಮಾರನನ್ನು ಪೂಜಿಸಿ ಬೇಕಾದ ಪದಾರ್ಥಗಳನ್ನು ಕೊಟ್ಟು ಕಳಿಸುತ್ತಾರೆ.
ಗುರುವಾರ ಜೋಗತಿಯರು ತಾಳಗುಂದ ಹೋಬಳಿಯ ಚಿಕ್ಕಮಾಗಡಿ, ಯಳಗೆರೆ, ಕೊಳಗಿ, ತೊಗರ್ಸಿ ಸೇರಿ ಹಲವು ಕಡೆ ಸಂಚರಿಸಿದ್ದು, ಇದಕ್ಕೆ ಪೂರಕವಾಗಿ ಸ್ವಲ್ಪ ಮಳೆಯೂ ಈ ಭಾಗದಲ್ಲಿ ಕಾಣಿಸಿಕೊಂಡಿದ್ದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net