ಅಮೆರಿಕದ ಹೊಸ ಅಧ್ಯಕ್ಷ ಜೋ ಬಿಡೆನ್- ಉದ್ಯಮಿ ಅಶೋಕ್ ಖೇಣಿ ಸ್ನೇಹಿತರು!

Ashok Kheny
Published on

ಬೀದರ್: ಇದು ಆಶ್ಚರ್ಯವಾದರೂ ಸತ್ಯ. ಇತ್ತೀಚೆಗಷ್ಟೇ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜೋ ಬಿಡೆನ್ ಅವರ ಜತೆ ನೈಸ್ ಕಂಪನಿ ಮುಖ್ಯಸ್ಥ ಹಾಗೂ ಮಾಜಿ ಶಾಸಕ ಅಶೋಕ್ ಖೇಣಿ ಬಹಳ ಹಿಂದಿನಿಂದಲೂ ಸ್ನೇಹ ಸಂಬಂಧ ಹೊಂದಿದ್ದಾರೆ!

ಈ ವಿಷಯವನ್ನು ಸ್ವತಃ ಖೇಣಿ ಅವರೇ ಸುದ್ದಿಗಾರರಿಗೆ ತಿಳಿಸಿದ್ದಾರೆ. ‘‘ಜೋ ಬಿಡೆನ್ ನನಗೆ ಪರಿಚಿತರು. ಹಿಂದೊಮ್ಮೆ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ನಾನೇ ಅವರಿಗೆ ಬಿಡೆನ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದೆ’’ ಎಂದು ಖೇಣಿ ಹೇಳಿದ್ದಾರೆ.

ಅಷ್ಟಕ್ಕೂ ಬಿಡೆನ್- ಖೇಣಿ ಸ್ನೇಹ ಎಷ್ಟು ಹಳೆಯದು ಗೊತ್ತೆ? ಮೂರು ದಶಕಗಳಷ್ಟು ಹಳೆಯದು. ಇದಕ್ಕೆ ಸಾಕ್ಷಿ ಎಂಬಂತೆ ಸ್ವತಃ ಖೇಣಿ ಅವರೇ ತಾವು ಬಿಡೆನ್ ಅವರೊಂದಿಗೆ ಇರುವ 1988ರ ಫೋಟೋ ಬಹಿರಂಗಪಡಿಸಿದ್ದಾರೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net