ಜೋಡೆತ್ತಿನ ಶರ್ಯತ್ತಿನಲ್ಲಿ ಪಾಟೀಲ ಪ್ರಥಮ

15
ಬಾವಚಿ ಗ್ರಾಮದಲ್ಲಿ ಏರ್ಪಡಿಸಿದ್ದ ಶರ್ಯತ್ತುಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಿ.ಎಸ್.ನಾಯಿಕ, ಕೆ.ಎಸ್.ಪುಂಡಿಪಲ್ಲೆ, ಎಂ.ಎಂ.ಪಾಟೀಲ, ಶಂಕರ ನಾಯಿಕ, ಎನ್.ಬಿ.ನಾಯಿಕ, ಎಂ.ವೈ.ಬಡಿಗೇರ, ಅವಗೌಡ ಪಾಟೀಲ, ದಯಾನಂದ ನಾಯಿಕ, ಕೇದರಿ ನಾಯಿಕ, ಮಹಾದೇವ ಐಹೊಳೆ ಇದ್ದರು.
Published on

ರಾಯಬಾಗ: ತಾಲೂಕಿನ ಬಾವಚಿ ಗ್ರಾಮದ ಜೈ ಹನುಮಾನ ಹಾಗೂ ಬೀರೇಶ್ವರ ಜಾತ್ರೆ ಸಂಭ್ರಮದಿಂದ ಜರುಗಿತು.
ಶನಿವಾರ ದೇವರಿಗೆ ನೈವೇದ್ಯ ಅರ್ಪಿಸಲಾಯಿತು. ನಂತರ ಏರ್ಪಡಿಸಿದ್ದ ವಿವಿಧ ಶರ್ಯತ್ತುಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಹಡಲಗಾದ ಸಾಗರ ಪಾಟೀಲ ಪ್ರಥಮ, ದಾನೋಳಿಯ ಬಂಡಾ ಶಿಂಧೆ ದ್ವಿತೀಯ, ಶೇಡಬಾಳದ ಸಂದೀಪ ಮಾನಕಾಪುರ ತತೀಯ, ಮೈಶಾಳದ ರಾಜು ರಾಜಮಾನೆ ಚತುರ್ಥ ಬಹುಮಾನ ಪಡೆದರು.

ಕುದುರೆ ಮತ್ತು ಎತ್ತಿನಗಾಡಿ ಶರ್ಯತ್ತಿನಲ್ಲಿ ಹಿರೇಕೋಡಿಯ ವೇದಾಂತ ಬಂಡಗಾರ ಪ್ರಥಮ, ಉಮ್ರಾಣಿಯ ಶಿವಗೌಡ ಕರೆನ್ನವರ ದ್ವಿತೀಯ, ಲಾಟವಾಡಿಯ ಸಚಿನ ಖೋತ ತೃತೀಯ ಬಹುಮಾನ ಪಡೆದರು.

ಕುದುರೆ ಮತ್ತು ಹಲ್ಲು ಹಚ್ಚದ ಕರ ಶರ್ಯತ್ತಿನಲ್ಲಿ ಹಾಲಟ್ಟಿಯ ಚಂದ್ರಕಾಂತ ಪೂಜಾರಿ ಪ್ರಥಮ, ಡೊಣವಾಡದ ರವಿ ಪಾಟೀಲ ದ್ವಿತೀಯ, ಉಮ್ರಾಣಿಯ ರಾಜು ಉಮ್ರಾಣಿ ತೃತೀಯ ಬಹುಮಾನ ಪಡೆದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಿ.ಎಸ್.ನಾಯಿಕ, ಅಪರ ಸರ್ಕಾರಿ ವಕೀಲ ಕೆ.ಎಸ್.ಪುಂಡಿಪಲ್ಲೆ, ಎಂ.ಎಂ.ಪಾಟೀಲ, ಶಂಕರ ನಾಯಿಕ, ಎನ್.ಬಿ.ನಾಯಿಕ, ಎಂ.ವೈ.ಬಡಿಗೇರ, ಅವಗೌಡ ಪಾಟೀಲ, ದಯಾನಂದ ನಾಯಿಕ, ಕೇದಾರಿ ನಾಯಿಕ, ಮಹಾದೇವ ಐಹೊಳೆ, ಶಂಕರ ಜಲಾಲಪುರೆ, ಮಾರುತಿ ನಾಯಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net