ಜೋಡಕುರಳಿ, ಚಿಕ್ಕೋಡಿ ತಂಡ ಪ್ರಥಮ

7
ಯಕ್ಸಂಬಾ ಪಟ್ಟಣದ ಶಿವಶಂಕರ ಜೊಲ್ಲೆ ಕನ್ನಡ ಶಾಲೆಯ ಆವರಣದಲ್ಲಿ ಸೋಮವಾರ ಜರುಗಿದ ಎಂ.ಪಿ.ಟ್ರೋಫಿ ಕಬಡ್ಡಿ ಪಂದ್ಯಾವಳಿಯ ಪುರುಷರ ವಿಭಾಗದ ೈನಲ್‌ನಲ್ಲಿ ಜಯಸಾಧಿಸಿದ ಜೋಡಕುರಳಿ ನ್ಯೂ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಗಣ್ಯರು ಪ್ರಶಸ್ತಿ ವಿತರಿಸಿದರು. ಅಪ್ಪಾಸಾಹೇಬ ಜೊಲ್ಲೆ, ಕಲ್ಲಪ್ಪ ಜಾಧವ ಇತರರು ಇದ್ದರು.
Published on

ಚಿಕ್ಕೋಡಿ ಗ್ರಾಮಿಣ: ತಾಲೂಕಿನ ಯಕ್ಸಂಬಾ ಪಟ್ಟಣದ ಶಿವಶಂಕರ ಜೊಲ್ಲೆ ಕನ್ನಡ ಶಾಲೆಯ ಆವರಣದಲ್ಲಿ ಸೋಮವಾರ ಜರುಗಿದ ಚಿಕ್ಕೋಡಿ-ಸದಲಗಾ ಮತಕ್ಷೇತ್ರ ವ್ಯಾಪ್ತಿಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಎಂ.ಪಿ.ಟ್ರೋಫಿ ಕಬಡ್ಡಿ ಪಂದ್ಯಾವಳಿಯ ೈನಲ್‌ನಲ್ಲಿ ಪುರುಷರ ವಿಭಾಗದಲ್ಲಿ ಜೋಡಕುರಳಿ ನ್ಯೂ ಸ್ಪೋರ್ಟ್ಸ್ ಕ್ಲಬ್ ಪ್ರಥಮ ಹಾಗೂ ಯಕ್ಸಂಬಾ ಸ್ಪೋರ್ಟ್ಸ್ ಕ್ಲಬ್ ದ್ವಿತೀಯ ಸ್ಥಾನ ಪಡೆದರೆ, ಮಹಿಳಾ ವಿಭಾಗದ ೈನಲ್‌ನಲ್ಲಿ ಚಿಕ್ಕೋಡಿಯ ಎ.ಎ. ಪಾಟೀಲ ಮಹಿಳಾ ಕಾಲೇಜು ಪ್ರಥಮ ಹಾಗೂ ಚಿಂಚಲಿಯ ವೀರ ರಾಣಿ ಚನ್ನಮ್ಮ ತಂಡ ದ್ವಿತೀಯ ಸ್ಥಾನ ಪಡೆಯಿತು.

ಪುರುಷರ ವಿಭಾಗದ ತೃತೀಯ ಪ್ರಶಸ್ತಿಯನ್ನು ಶಮನೇವಾಡಿಯ ಸಿದ್ದೇಶ್ವರ ತಂಡ, ನಾಲ್ಕನೇ ಸ್ಥಾನವನ್ನು ನಾಗರಾಳದ ವಿ.ಎ.ಸ್ಪೋರ್ಟ್ಸ್ ಕ್ಲಬ್ ತಮ್ಮದಾಗಿಸಿಕೊಂಡವು.

ಮಹಿಳೆಯರ ವಿಭಾಗದಲ್ಲಿ ತತೀಯ ಸ್ಥಾನವನ್ನು ಚಿಕ್ಕೋಡಿಯ ಝಾನ್ಸಿ ರಾಣಿ ತಂಡ, ನಾಲ್ಕನೇ ಸ್ಥಾನವನ್ನು ನಣದಿಯ ಬಸವಜ್ಯೋತಿ ಪದವಿ ಕಾಲೇಜು ತಂಡ ಪಡೆದವು. ಪುರುಷರ ೈನಲ್‌ನಲ್ಲಿ ಜೋಡಕುರಳಿ ನ್ಯೂ ಸ್ಪೋರ್ಟ್ಸ್ ಕ್ಲಬ್ 21 ಅಂಕ ಗಳಿಸಿತು ಹಾಗೂ ಯಕ್ಸಂಬಾ ಸ್ಪೋರ್ಟ್ಸ್ ಕ್ಲಬ್ 11 ಅಂಕಪಡೆಯಿತು.

ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ಕಲ್ಲಪ್ಪ ಜಾಧವ, ಸಿದ್ರಾಮ ಗಡದೆ, ಯಾಸೀನ ತಾಂಬೂಳೆ, ಲಕ್ಷ್ಮಣ ಕಬಾಡೆ, ಮನೋಹರ ಕುಪ್ಪಾನಟ್ಟೆ ವಿವಿಧ ಗಣ್ಯರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net