ಉಡುಪಿ ವ್ಯಾಪ್ತಿಯ ಅಂಗನವಾಡಿ ಹುದ್ದೆ ಆಕಾಂಕ್ಷಿಗಳಿಗೆ ಆಯಾ ಅಲ್ಪಸಂಖ್ಯಾತ ಸಮುದಾಯದ ಭಾಷೆ ಗೊತ್ತಿರಬೇಕು

state
Published on

ಉಡುಪಿ: ಜಿಲ್ಲೆಯ ನಾಲ್ಕು ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

14 ಕಾರ್ಯಕರ್ತೆ ಹಾಗೂ 32 ಅಂಗನವಾಡಿ ಸಹಾಯಕಿ ಹುದ್ದೆಗಳಿವೆ. ಕಾರ್ಯಕರ್ತೆ ಹುದ್ದೆಗೆ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಸಹಾಯಕಿ ಹುದ್ದೆಗಳಿಗೆ ಕನಿಷ್ಟ 4 ನೇ ತರಗತಿ ಹಾಗೂ ಗರಿಷ್ಠ 9 ನೇ ತರಗತಿ ಪಾಸಾಗಿರಬೇಕು.

ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಕನ್ನಡ ಭಾಷೆಯೊಂದಿಗೆ ಆಯಾ ಅಲ್ಪಸಂಖ್ಯಾತ ಸಮುದಾಯದ ಭಾಷೆ ಬಲ್ಲವರಾಗಿರಬೇಕು.

ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ಪೂರೈಸಿದ ಅದೇ ಗ್ರಾಮದ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ https://anganwadirecruit.kar.nic.in ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net