ಮೈಸೂರು ಎಐಐಎಸ್​ಎಚ್​​ನಲ್ಲಿ ಪ್ರಾಧ್ಯಾಪಕರಾಗಲು ವಿದ್ಯಾರ್ಹತೆ ಏನು?

AIISH
Published on

ಮೈಸೂರು : ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಎಐಐಎಸ್​ಎಚ್​) ಯಲ್ಲಿ ಪ್ರಾಧ್ಯಾಪಕ ಹಾಗೂ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಾಧ್ಯಾಪಕ -ಲ್ಯಾಂಗ್ವೇಜ್ ಪೆಥಾಲಜಿ 1, ಆಡಿಯಾಲಜಿ-3, ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್- 2 ಹುದ್ದೆಗಳಿವೆ.

ಆಯಾ ಕ್ಷೇತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹೊಂದಿರಬೇಕು. ಬೋಧನೆ, ಸಂಶೋಧನಾ ಅನುಭವ ಹೊಂದಿರಬೇಕು. ಪ್ರಾಧ್ಯಾಪಕ ಹುದ್ದೆಗೆ ಮಾಸಿಕ 47,000 ರೂ. ಸಂಬಳ ಹಾಗೂ ಇನ್ನುಳಿದ ಹುದ್ದೆಗೆ ಮಾಸಿಕ 32,000 ರೂ. ನೀಡಲಾಗುತ್ತದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 17ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ https://aiishmysore.in/ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net