ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಜಾಬಿನ ಕಾಲೇಜ್

New Jabin New
Published on

ಹುಬ್ಬಳ್ಳಿ : ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಗರದ ಪರಪ್ಪ ಚನ್ನಪ್ಪ ಜಾಬಿನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಹಾರ್ದಿಕ ಬಂಡಿವಡ್ಡರ ಹಾಗೂ ಅನುಷಾ ಬಿಳಚಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.

15 ವಿವಿಧ ಕ್ರೀಡೆಗಳಲ್ಲಿ ಜಾಬಿನ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ತೋರಿದ್ದಾರೆ. ಕಾಲೇಜ್ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದೆ.

ಆಫ್ತಾಬ ಖಾನ ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಜನೆಟ್ ಬೆಲ್ಲಂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಮತ್ತು ಟ್ರಿಪಲ್ ಜಂಪನಲ್ಲಿ ತೃತಿಯ ಸ್ಥಾನ ಪಡೆದಿದ್ದಾಳೆ.

ದ್ರಾಕ್ಷಾಯಿಣಿ 3,000 ಮೀ. ನಡಿಗೆಯಲ್ಲಿ ಪ್ರಥಮ, ಗೌರಿ ಹಿರೇಮಠ ಹಾಗೂ ಶ್ರೇಯಾ ಬಿ. 3,000 ಮೀಟರ್ ಓಟದಲ್ಲಿ ದ್ವಿತೀಯ ಮತ್ತು ತೃತಿಯ ಸ್ಥಾನ ಪಡೆದಿದ್ದಾರೆ. ನಿವೇದಿತಾ ನಾಗಸಮುದ್ರ, ಶ್ರದ್ಧಾ ನವಲಗುಂದ ತಂಡದವರು 4 /100 ರಿಲೇ ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಬಲ್ಲೆ ಎಸೆತದಲ್ಲಿ ಮಲ್ಲಿಕಾರ್ಜುನ ರಗಡಿ ದ್ವಿತೀಯ ಸ್ಥಾನ ಪಡೆದಿದ್ದಾನೆ.

ಎತ್ತರ ಜಿಗಿತದಲ್ಲಿ ರಯಾನ ಶೇಖ ಪ್ರಥಮ ಸ್ಥಾನ ಪಡೆದಿದ್ದಾನೆ. ಆದರ್ಶ ಬಿಜಾಪುರ, ಕುಮಾರ ಓಂಕಾರ ತಂಡದರು 4 /400 ರಿಲೇ ಯಲ್ಲಿ ದ್ವಿತೀಯ ಮತ್ತು ವಿನಾಯಕ 400 ಮೀಟರ್ ಓಟದಲ್ಲಿ ದ್ವಿತಿಯ ಸ್ಥಾನ ಪಡೆದಿದ್ದಾನೆ. ಉದ್ದ ಜಿಗಿತದಲ್ಲಿ ಆತಿಫ್ ಮಕಾನದಾರ ದ್ವಿತೀಯ ಸ್ಥಾನ ಪಡೆದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net