

ಗಜೇಂದ್ರಗಡ: ಯುವಕ-ಯುವತಿಯರಿಗೆ ಸೇನೆಯಲ್ಲಿ ಹಲವಾರು ಉದ್ಯೋಗಾವಕಾಶಗಳಿದ್ದು ವಿದ್ಯಾರ್ಥಿಘಳು ಸದ್ಬಳಕೆ ಮಾಡಿಕೊಮಡು ದೇಶ ಸೇವೆ ಮಾಡಬೇಕು ಎಂದು ಸಿಆರ್‌ಪಿಎಫ್ ಯೋಧ ದಶರಥ ಸಿಂಗ್ ರಜಪೂತ ಹೇಳಿದರು.
ಪಟ್ಟಣದ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪದವಿ ಮಹಾವಿದ್ಯಾಲಯದ ಐಕ್ಯೂಎಸಿಯಡಿ ಉದ್ಯೋಗ ಮಾಹಿತಿ ಘಟಕದ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಸೇನಾ ಉದ್ಯೋಗ ಹಾಗೂ ಪರೀಕ್ಷಾ ಸಿದ್ಧತೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿಯಿಂದ ಪದವಿವರೆಗಿನ ಹಾಗೂ ಎಲ್ಲ ಕೋರ್ಸ್‌ಗಳಿಗೆ ತಕ್ಕಂತೆ ಆಯಾ ವಯೋಮಾನದ ಪ್ರಕಾರ ಅವಕಾಶಗಳಿವೆ.
ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಮಹೇಂದ್ರ ಜಿ ಮಾತನಾಡಿ, ಯುವಕರು ದೃಢಸಂಕಲ್ಪ ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರೂ ಅಮೋಘ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ನಿರಂತರ ಕಾರ್ಯಪ್ರವೃತ್ತರಾಗಬೇಕು ಎಂದರು.
ಯೋಧ ದಶರಥ ಸಿಂಗ್ ರಜಪೂತ ಅವರನ್ನು ಸನ್ಮಾನಿಸಲಾಯಿತು. ಜೀವಿತಾ ಎಂ, ಮಹಾಂತೇಶ ಜೀವಣ್ಣವರ, ಹಿತೇಶ ಬಿ, ಬಿ. ವಿ. ಮುನವಳ್ಳಿ, ಎಂ. ಎಚ್. ಸೋಮನಕಟ್ಟಿ ಇತರರು ಇದ್ದರು.