ಕಟೀಲು ದೇವಳ ಪದವಿ ಕಾಲೇಜಿನಲ್ಲಿ ಉದ್ಯೋಗ ನೇಮಕಾತಿ

nemakathi
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜಿನಲ್ಲಿ ಸ್ಥಳೀಯ ಉದ್ಯೋಗದಾತ ಕಂಪನಿಗಳಿಂದ ವಿದ್ಯಾರ್ಥಿಗಳ ನೇರ ನೇಮಕಾತಿ ಸಂದರ್ಶನ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸಂಚಾಲಕ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು , ದೇವಸ್ಥಾನದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ, ಪ್ರಾಚಾರ್ಯ ಡಾ.ವಿಜಯ್ ವಿ. ಮೊದಲಾದವರಿದ್ದರು.
Published on

ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜಿನಲ್ಲಿ ಸ್ಥಳೀಯ ಉದ್ಯೋಗದಾತ ಕಂಪನಿಗಳಿಂದ ವಿದ್ಯಾರ್ಥಿಗಳ ನೇರ ನೇಮಕಾತಿ ಸಂದರ್ಶನ ಕಾರ್ಯಕ್ರಮ ನಡೆಯಿತು. ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಆನುವಂಶಿಕ ಮೊಕ್ತೇಸರ ಕಾಲೇಜಿನ ಸಂಚಾಲಕ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ಕಾರ್ಯಕ್ರಮ ಉದ್ಘಾಟಿಸಿದರು.

ದೇವಸ್ಥಾನದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ, ಪ್ರಾಚಾರ್ಯ ಡಾ.ವಿಜಯ್ ವಿ. ಅವರು ಉದ್ಯೋಗ ನೇಮಕಾತಿ ಬಗ್ಗೆ ಮಾತನಾಡಿದರು. ಕಾಲೇಜಿನ ನೇಮಕಾತಿ ವ್ಯವಸ್ಥಾಪಕ ಡಾ.ಎಂ.ಪದ್ಮನಾಭ ಮರಾಠೆ ಉಪಸ್ಥಿತರಿದ್ದರು. ಅದಿತೇಯ ಸ್ವಾಗತಿಸಿದರು. ಯಶ್ ಶೆಟ್ಟಿ ವಂದಿಸಿದರು. ದಿಶಾ ಕಾರ್ಯಕ್ರಮ ನಿರೂಪಿಸಿದರು. ನಾಲ್ಕು ಕಂಪನಿಗಳು ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net