ಬೆಳಗಾವಿಯಲ್ಲಿ ಜೂ.23ಕ್ಕೆ ಮಿನಿ ಉದ್ಯೋಗ ಮೇಳ

job-fair-feaured.png
Published on

ಬೆಳಗಾವಿ : ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಜೂ.23 2023 ರಂದು ಬೆಳಗ್ಗೆ 9.30 ರಿಂದ ಮದ್ಯಾಹ್ನ 1.30 ಗಂಟೆಯವರೆಗೆ ಖಾಸಗಿ ಕಂಪನಿಗಳಿಂದ ಮಿನಿ ಉದ್ಯೋಗ ಮೇಳವನ್ನು ನೆಹರು ನಗರದಲ್ಲಿನ ಎಸ್.ಎಸ್.ಎಸ್ ಸಮಿತಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ, ರಾಮದೇವ ಹೋಟೆಲ್ ಹಿಂದುಗಡೆ ಆಯೋಜಿಸಲಾಗಿದೆ.
ಎಸ್.ಎಸ್.ಎಲ್.ಸಿ, ಐಟಿಐ (ಪಿಟ್ಟರ್, ವೆಲ್ಡರ್, ಮನಿಷ್ ಎಲೆಕ್ಟ್ರೀಷಿಯನ್) ಹಾಗೂ ಡಿಪ್ಲೋಮಾ ಮತ್ತು ಯಾವದೇ ಪದವಿ ಮತ್ತು ಯಾವುದೇ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಮೊ. ಸಂಖ್ಯೆ 8147685479ಕ್ಕೆ ಸಂಪರ್ಕಿಸಬೇಕು ಎಂದು ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net