ಅಪ್ರೆಂಟಿಸ್ ತರಬೇತಿಯಿಂದ ಉದ್ಯೋಗಾವಕಾಶ

Job opportunities through apprenticeship training
Published on

ನರಗುಂದ: ಅಪ್ರೆಂಟಿಸ್ ತರಬೇತಿ ಪೂರ್ಣಗೊಳಿಸಿದರೆ ಸಾಕಷ್ಟು ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಇದಕ್ಕಾಗಿ ಅಪ್ರೆಂಟಿಸ್ ತರಬೇತಿ ಪೂರ್ಣಗೊಳಿಸುವುದು ಕಡ್ಡಾಯ ಎಂದು ಧಾರವಾಡದ ಕನೆಕ್ಟ್ ಸಂಸ್ಥೆ ಅಪ್ರೆಂಟಿಸ್ ಅಧಿಕಾರಿ ಅಕ್ಷತಾ ಹೊಳಲಾಪೂರ ಹೇಳಿದರು.

ತಾಲೂಕಿನ ಶಿರೋಳ ಗ್ರಾಮದ ಶ್ರೀ ಮಾದಾರ ಚನ್ನಯ್ಯ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಕಾರು ಉತ್ಪಾದನೆ ಘಟಕ ಬಿಡದಿ ಬೆಂಗಳೂರ ಹಾಗೂ ಧಾರವಾಡ ಕನೆಕ್ಟ್ ಸಂಸ್ಥೆ ಸಹಯೋಗದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ಅಪ್ರೆಂಟಿಸ್ ಸಂದರ್ಶನದಲ್ಲಿ ಅವರು ಮಾತನಾಡಿದರು.

ಐಟಿಐ ಮುಗಿದ ತಕ್ಷಣವೇ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿ ಅಲೆಯದೇ ಉದ್ಯೋಗಕ್ಕಾಗಿ ನಮ್ಮ ಸಂಸ್ಥೆ ಸಂಪರ್ಕಿಸಿದರೆ ಎಲ್ಲ ರೀತಿಯ ಮಾರ್ಗದರ್ಶನ ನೀಡಲಾಗುವುದು ಎಂದರು.

ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ನಿಶ್ಚಿತ ಉದ್ಯೋಗ ಅಧಿಕಾರಿ ಶಂಕ್ರಪ್ಪ ಕುಪ್ಪಸ್ತ, ಪ್ರಾಚಾರ್ಯ ಬಸವರಾಜ ಸಾಲಿಮಠ ಮಾತನಾಡಿದರು. ಸಂಸ್ಥೆಯ ಸಿಬ್ಬಂದಿ ಶ್ರೀಕಾಂತ ದೊಡಮನಿ, ಪ್ರಭುಲಿಂಗ ಶಿರಿಯಣ್ಣವರ, ಶ್ರೀಧರ ಬೇವಿನಕಟ್ಟಿ, ವೀರನಗೌಡ, ಸೋಮಶೇಖರಪ್ಪ ಗೊರವರ, ಭೂಪತಿರಾಜ ದೋತ್ರದ, ಮೇಘಾ ಭೋಸ್ಲೆ, ಕಾಳಮ್ಮ ಕಮ್ಮಾರ, ಶಿವಾನಂದ ಪೂಜಾರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net