ವಾಣಿಜ್ಯ ವಿಭಾಗದಲ್ಲಿ ಉದ್ಯೋಗವಕಾಶ ವಿಪುಲ

Job opportunities are abundant in the commercial sector.
ವಿಜಯಪುರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಎಸ್​.ಟಿ. ಮೇರವಾಡೆ ಮಾತನಾಡಿದರು. ಅಜಿತ ಶಿರೂರ, ಜಿ.ಎಸ್​. ಬಗಲಿ, ಮಂದಾರ ಗಬ್ಬೂರ ಮತ್ತಿತರರಿದ್ದಾರೆ.
Published on

ವಿಜಯಪುರ : ವಾಣಿಜ್ಯ ವಿಭಾಗವು ಉದ್ಯೋಗ ಅವಕಾಶಗಳನ್ನು ನೀಡುವ ಒಂದು ಖಜಾನೆ ಎಂದು ಉಪನ್ಯಾಸಕ ಅಜಿತ ಶಿರೂರ ಹೇಳಿದರು.

ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದಡಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಣಿಜ್ಯ ವಿಭಾಗವು ಸರ್ಕಾರಿ ಮತ್ತು ಸರ್ಕಾರೇತರ ವಲಯದಲ್ಲಿ ಉದ್ಯೋಗ ಪಡೆಯಲು ಸರಳವಾದ ವಿಭಾಗವಾಗಿದೆ ಎಂದರು.

ವಾಣಿಜ್ಯ ವಿಭಾಗದ ಉಪನ್ಯಾಸಕ ಜಿ.ಎಸ್​. ಬಗಲಿ ಮಾತನಾಡಿ, ವಾಣಿಜ್ಯ ವಿಭಾಗವು ಸಮುದ್ರದಂತೆ. ಈ ಪದವಿ ಪೂರೈಸಿದವರು ಲೆಕ್ಕಶಾಸ ಮತ್ತು ಆರ್ಥಿಕ ನಿರ್ವಹಣೆ, ಬ್ಯಾಂಕಿಂಗ್​ ಮತ್ತು ಹಣಕಾಸಿನ ತಂತ್ರಜ್ಞಾನ, ಉದ್ಯಮ ಸೇರದಂತೆ ಮುಂತಾದ ಕಡೆ ಉದ್ಯೋಗಾವಕಾಶ ಪಡೆಯಲು ಹಾಗೂ ಸೃಷ್ಟಿಸಲು ಸಹಾಯಕಾರಿಯಾಗಿದೆ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್​.ಟಿ. ಮೇರವಾಡೆ ಮಾತನಾಡಿ, ಸಾಹಿತ್ಯ ಅಧ್ಯಯನ ಮಾಡಿದ ನಾನು ವಾಣಿಜ್ಯ ಮತ್ತು ಅರ್ಥಶಾಸ ಅನುಭವದಿಂದ ಕಲಿತಿರುವೆ. ಯಾವುದೇ ಪದವಿ ಓದಿದರೂ ವಾಣಿಜ್ಯಶಾಸ ತಿಳಿದುಕೊಳ್ಳಲೇ ಬೇಕಾದ ವಿಷಯ ಎಂದರು.

ಉಪನ್ಯಾಸಕ ಜಿ.ಡಿ. ಹಿರೇಮಠ ಮಾತನಾಡಿದರು. ಬಿ.ಎ. ಕುಲಕರ್ಣಿ, ಮಂದಾರ ಗಬ್ಬೂರ, ಮೇಘಾ ಹಿರೇಮಠ, ಎಂ.ಟಿ. ಶೇಲಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net