ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಖಾತೆಯಿಂದಲೇ 2.50 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ಕತಾರ್‌ನಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಖಾತೆಯಿಂದ 2,50,325ರೂ. ವಂಚನೆಗೈದ ಬಗ್ಗೆ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ರೋಹನ್ ಶರ್ಮ ಮತ್ತು ಆಲಿ ಪ್ರಕರಣದ ಆರೋಪಿಗಳು.
ದೂರುದಾರರ ಇ-ಮೇಲ್‌ಗೆ ಕತಾರ್‌ನ ಕಂಪನಿಯೊಂದರಲ್ಲಿ ಇಂಜಿನಿಯರ್ ಉದ್ಯೋಗವಿದ್ದು, ಇದರ ಇಂಟರ್‌ವ್ಯೆ ಇದೆಯೆಂದು ಸಂದೇಶ ಬಂದಿತ್ತು. ಅದರಂತೆ ದೂರುದಾರರು ಅರ್ಜಿ ಸಲ್ಲಿಸಲು ನಿರ್ಧರಿಸಿ, ಆರೋಪಿಗಳು ಹೇಳಿದಂತೆ ಅಂಕಪಟ್ಟಿ, ರೆಸ್ಯೂಮ್, ಸ್ಯಾಲರಿ ಸ್ಲಿಪ್, ಪಾಸ್‌ಪೋರ್ಟ್ ಪ್ರತಿ, ಕೋವಿಡ್ ವ್ಯಾಕ್ಸಿನೇಶನ್ ಸರ್ಟಿಫಿಕೇಟ್‌ನ್ನು ಇ-ಮೇಲ್ ಮೂಲಕ ಕಳುಹಿಸಿಕೊಟ್ಟಿದ್ದರು. ಇದಾದ ಕೆಲದಿನಗಳ ಬಳಿಕ ಖಾತೆಯಿಂದ ಹಂತ ಹಂತವಾಗಿ 2,50,325 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net