ಅಂಚೆ ಇಲಾಖೆ ನೌಕರಿ ಪಡೆಯಲು ನಕಲಿ ಅಂಪಪಟ್ಟಿ ನೀಡಿದ 14 ಜನರ ವಿರುದ್ಧ ಎಫ್‌ಐಆರ್‌

fake-marks-card
Published on

ಶಿರಸಿ: ಅಂಚೆ ಇಲಾಖೆಯಲ್ಲಿ ನಕಲಿ ಅಂಕ ಪಟ್ಟಿ ನೀಡಿ ಗ್ರಾಮೀಣ ಅಂಚೆ ಸೇವಕ ಹುದ್ದೆ ಪಡೆದ 14 ಜನರ ವಿರುದ್ಧ ಇಲ್ಲಿನ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.
ಶಿರಸಿ ಉತ್ತರ ಉಪ ವಿಭಾಗದ ಅಂಚೆ ನಿರೀಕ್ಷಕ ಮಂಜುನಾಥ ರಾಮಪ್ಪ ದೊಡ್ಡಮನಿ ಈ ಬಗ್ಗೆ ದೂರು ನೀಡಿದ್ದಾರೆ. ಯಾದಗಿರಿಯ ಮೋಹನ್ ನಾಯಕ, ಗೋಕಾಕದ ಹನುಮಂತ ಮದಿಹಳ್ಳಿ, ರಾಯಭಾಗದ ವಿಠ್ಠಲ ಹೊಸೂರ್, ಗೋಕಾಕದ ದುಂಡಪ್ಪ ಆಶಿರೊಟ್ಟಿ ,ಕಲಬುರಗಿಯ ಶರಣಕುಮಾರ ನಾಯಕ್, ವಿಜಯಪುರದ ಸುರೇಶ ಕುಡಗಿ, ಬಾಗಲಕೋಟೆಯ ಅಮೃತಾ ನಾಯಕ, ವಿಜಯಪುರದ ಸಚಿನ್ ಬಜಂತ್ರಿ ,ಮಮಿತಾ ರಾಥೋಡ,ಸತೀಶ ಪವಾರ್,ಆಕಾಶ ಬಜಂತ್ರಿ,ಮೋಹನ್ ಚೌಹಾಣ್, ದಿಲೀಪ್ ಪವಾರ್, ಹಾಗೂ ಬೆಳಗಾವಿಯ ರವಿ ಮಹಾದೇವಪ್ಪ ದಡ್ಡಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
2023 ರ ಜನವರಿಯಲ್ಲಿ ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಅರ್ಜಿ ಸಲ್ಲಿಸಿದ ಇವರೆಲ್ಲರೂ ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿ ಗ್ರಾಮೀಣ ಅಂಚೆ ಸೇವಕ ಹುದ್ದೆ ಪಡೆದು, ಇಲಾಖೆಗೆ ಮೊಸ ಮಾಡಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net