ಉದ್ಯೋಗ ಕೊಡಿಸುವುದಾಗಿ ವಂಚನೆ-ಧಾರವಾಡದ ದಂಪತಿ ವಿರುದ್ಧ ಎಫ್‌ಐಆರ್‌

Job-Proud
Published on

ಶಿರಸಿ: ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ 3 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಧಾರವಾಡದ ಇಬ್ಬರ ಬಗ್ಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿರಸಿಯ ಕಸ್ತುರಬಾ ನಗರದ ಸೋನಿಯಾ ಗಲ್ಲಿಯ ಖುತೇಜಾಬಿ ಮೊಹಮದ್ ಇಕ್ಬಾಲ್ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರಿನ ವಿಚಾರಣೆ ನಡೆದು, ನ್ಯಾಯಾಲಯದ ಸೂಚನೆಯ ಮೇರೆಗೆ ಧಾರವಾಡ ಅಗ್ರಿಕಕ್ಚರ್ ಕಾಲೇಜ್ ಎದುರಿನ ನಿವಾಸಿಗಳಾದ ಅಲ್ತಾಫ್ ಬಶೀರ್ ಶೇಖ್ ಹಾಗೂ ಫಾತೀಮಾ ಅಲ್ತಾಫ್ ಶೇಖ್ ವಿರುದ್ಧ ದೂರು ದಾಖಲಾಗಿದೆ.
ಅವರು ಅರಣ್ಯ ಇಲಾಖೆ ಹಾಗೂ ನೀರಾವರಿ ಇಲಾಖೆಯಲ್ಲಿ ತಮಗೆ ಪರಿಚಯದವರಿದ್ದು, ಮಗನಿಗೆ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಕೊಡಿಸುವುದಾಗಿ ತಿಳಿಸಿದ್ದರು. ಮತ್ತು ನೇಮಕಾತಿ ಪಟ್ಟಿಯೊಂದನ್ನು ತೋರಿಸಿ, ನಿಮ್ಮ ಮಗನ ಹೆಸರು ಬಂದಿದೆ ಎಂದು ನಂಬಿಸಿ ಹಣ ಕೊಟ್ಟು ಹೋಗಿದ್ದರು. ಆದರೆ, ನೌಕರಿ ಕೊಡಿಸದೇ ಹಣವನ್ನೂ ವಾಪಸ್ ಮಾಡಿಲ್ಲ ಎಂದು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net