

ಗದಗ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ರೋಟರಿ ಗದಗ ಸೆಂಟ್ರಲ್ ಹಾಗೂ ಇನ್‌ಸ್ಪೈರಾ ಟೆಕ್ನೋಲಜಿಸ್, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಉತ್ಸವ-2023 ರಂ ಅಂಗವಾಗಿ ಸೆ 9 ರಂದು ಬೆಳಗ್ಗೆ 10 ಕ್ಕೆ ನಗರದ ಜಗದ್ಗುರು ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷ ವಿಜಯಕುಮಾರ ಹೇಳಿದರು.
ಗುರುವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಉದ್ಯೋಗ ಮೇಳದಲ್ಲಿ ರಾಜ್ಯದ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು, ಯುವಕ ಯುವತಿಯರು ಇದರ ಸದುಪಯೋಗವನ್ನು ಪಡೆಯಬೇಕು. ಎಲ್.ಎಸ್.ಎಲ್.ಸಿ., ಪಿ.ಯು.ಸಿ., ಬಿ.ಎ., ಬಿ. ಕಾಂ., ಐ.ಟಿ.ಐ, ಬಿ.ಇ. ಎಂ.ಟೆಕ್, ನರ್ಸಿಂಗ್, ಸೇರಿದಂತೆ ಯಾವುದೇ ಪದವಿ ಪಡೆದುಕೊಂಡವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ತಮ್ಮ ಸ್ವ-ವಿವರಯುಳ್ಳ ಮಾಹಿತಿ, ವಿದ್ಯಾರ್ಹತೆಯ ಪ್ರಮಾಣ ಪತ್ರ, ಆಧಾರ ಕಾರ್ಡದೊಂದಿಗೆ ಆಗಮಿಸಿ ತಮ್ಮ ಹೆಸರನ್ನು ನೋಂದಾಯಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮದುಸೂಧನ ಪುಣೇಕರ, ರಾಜು ಗುಡಿಮನಿ, ಚಂದ್ರು ಬಾಳಿಹಳ್ಳಿಮಠ, ಡಾ.ಸಂತೋಷ ತೊಟಗಂಟಿಮಠ ಮುಂತಾದವರು ಹಾಜರಿದ್ದರು.