ಫೆ. 6ಕ್ಕೆ ಉದ್ಯೋಗ ಮೇಳ

New KLE New
Published on

ಹುಬ್ಬಳ್ಳಿ : ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ವತಿಯಿಂದ ಇಲ್ಲಿನ ಕೆಎಲ್​ಇ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್​ನಲ್ಲಿ ಫೆ. 6ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ‘ಅಪ್ರೇಂಟಿಷಿಪ್ ಹಾಗೂ ಉದ್ಯೋಗ ಮೇಳ-2025’ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಪ್ರೊ. ವೀರೇಶ ಅಂಗಡಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರ ಸಕಾರದ ಶಿಕ್ಷಣ ಸಚಿವಾಲಯ ಹಾಗೂ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಈ ಮೇಳ ಏರ್ಪಡಿಸಲಾಗಿದೆ ಎಂದರು.

2020, 2021, 2022, 2023 ಹಾಗೂ 2024ರಲ್ಲಿ ಉತ್ತೀರ್ಣರಾದ ಇಂಜಿನಿಯರಿಂಗ್ ಎಲ್ಲ ವಿಭಾಗದವರು, ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಮತ್ತಿತರ ಪದವೀಧರರು, ಇಂಜಿನಿಯರಿಂಗ್ ಹಾಗೂ ಜನರಲ್ ಸ್ಟ್ರೀಮ್ ಡಿಪ್ಲೋಮಾ ಪದವೀಧರರು ಭಾಗವಹಿಸಬಹುದು. 30ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಒಬ್ಬ ಅಭ್ಯರ್ಥಿ ಮೂರು ಕಂಪನಿಗಳಿಗೆ ಮಾತ್ರ ಸಂದರ್ಶನ ನೀಡಬಹುದಾಗಿದೆ. ಸಂದರ್ಶನಕ್ಕೆ ಬರುವಾಗ ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳ ನಕಲು ಪ್ರತಿಗಳನ್ನು ತರಬೇಕು. 2 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net