

ಹುಬ್ಬಳ್ಳಿ: ಇಲ್ಲಿಯ ತಾರಿಹಾಳದ ಕೈಗಾರಿಕಾ ಪ್ರದೇಶದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಎಕ್ಸ್‌ಲೆನ್ಸ್ ಇನ್ ಮ್ಯಾನೇಜ್‌ಮೆಂಟ್ ಸೈನ್ಸ್ ಕ್ಯಾಂಪಸ್‌ನಲ್ಲಿ ಆ. 3ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಉದ್ಯೋಗ ಮೇಳ ಏರ್ಪಡಿಸಲಾಗಿದೆ.
ಮುತ್ತೂಟ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ, ಪ್ರೊಫಿಷಿಯಂಟ್ ಮೈಂಡ್ಸ್, ಇನ್ಫೋಸಿಸ್, ಕ್ಯಾಪ್ಜೆಮಿನಿ, ಡಿಪ್ಸನ್ಸ್, ಫ್ಲಿಪ್‌ಕಾರ್ಟ್, ನೈಕಾ, ಅಡೆಕೊ, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಎಲೆಕ್ಟ್ರಾನಿಕ್ಸ್, ಆರ್‌ಎನ್‌ಎಸ್ ಮೋಟಾರ್ಸ್, ಬಿವಿಎಂ, ಇಎಸ್‌ಎಸ್‌ವಿಇಇ, ಜೋಯಾಲುಕ್ಕಾಸ್‌ನಂತಹ ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. ಹು-ಧಾ ಮತ್ತು ನೆರೆ ಜಿಲ್ಲೆಯ ಪದವೀಧರರು ಅವಕಾಶ ಬಳಸುವಂತೆ ಕೈಜೆನ್ ಎಜುಪ್ಲಸ್ ಸೊಸೈಟಿ ಮತ್ತು ಐಇಎಂಎಸ್ ಅಧ್ಯಕ್ಷ ಚಾರ್ಟರ್ಡ್ ಅಕೌಂಟೆಂಟ್ ಡಾ. ಎನ್.ಎ. ಚರಂತಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗೋಕುಲ ರೋಡ್‌ನ ಬಸ್ ನಿಲ್ದಾಣ ದ್ವಾರದ ಬಳಿಯಿಂದ ಬೆಳಗ್ಗೆ 9.30ರಿಂದ ಕಾಲೇಜ್ ಬಸ್ ಸೌಲಭ್ಯವಿದೆ.