

ಮೈಸೂರು: ರೋಟರಿ ಕ್ಲಬ್ ಆಫ್ ಮೈಸೂರು ಉತ್ತರ ಮತ್ತು ಎನ್‌ಎಸ್ ಸೇವಾ ಟ್ರಸ್ಟ್, ಕರುನಾಡ ರಕ್ಷಣಾ ವೇದಿಕೆ ಸಹಯೋಗದಲ್ಲಿ ಡಿ. 22ರಂದು ಬೃಹತ್ ಉದ್ಯೋಗ ಮೇಳ ಮತ್ತು ಅಪೂರ್ವ ಮಿಲನ ಸ್ವರಮಾಧುರ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಎಚ್.ಜಗದೀಶ್ ತಿಳಿಸಿದರು.
ನಟರಾಜ ಕಲ್ಯಾಣ ಮಂಟಪದಲ್ಲಿ ಅಂದು ಬೆಳಗ್ಗೆ 9.30ಕ್ಕೆ ನಡೆಯುವ ಉದ್ಯೋಗ ಮೇಳದಲ್ಲಿ 70ಕ್ಕೂ ಹೆಚ್ಚು ವಿವಿಧ ಕಂಪನಿಗಳು ಭಾಗವಹಿಸುತ್ತಿದ್ದು, 8ರಿಂದ ಪದವಿ ವಿದ್ಯಾರ್ಹತೆ ಪಡೆದಿರುವ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ.ಸಂ.9980959598 ಮತ್ತು 7411204937 ಸಂಪರ್ಕಿಸಬಹುದು ಎಂದು ವಿವರಿಸಿದರು.
ಅದೇ ದಿನ ಸಂಜೆ 4.30ಕ್ಕೆ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಅಂಧ ಗಾಯಕರಿಂದ ಸುಮಧುರ ಹಾಡುಗಳ ಸ್ವರಮಾಧುರ್ಯ ಅಪೂರ್ವ ಮಿಲನ ಕಾರ್ಯಕ್ರಮ ನಡೆಯಲಿದೆ. ಈ ಎರಡೂ ಕಾರ್ಯಕ್ರಮಗಳಲ್ಲಿ ಸ್ಯಾನ್ ಗ್ರೂಪ್ ಆಫ್ ಹೋಟೆಲ್ ಮಾಲೀಕ ಅನಿಲ್, ಎಸ್.ಎಂ.ಪಿ. ಡೆವಲಪರ್ಸ್ ಮಾಲೀಕ ಶಿವಪ್ರಕಾಶ್, ಜಲ್‌ಮಹಲ್ ಹೋಟೆಲ್ ಮಾಲೀಕ ಚಂದ್ರಶೇಖರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸಂಸ್ಥೆಯ ರಾಜಶೇಖರ ಕದಂಬ, ನಂಜುಂಡಸ್ವಾಮಿ, ಲೋಕನಾಥ್ ಇದ್ದರು.