

ಮಂಡ್ಯ: ಮೈಸೂರಿನ ಮಹಾರಾಜ ಎಜುಕೇಷನ್ ಟ್ರಸ್ಟ್ ವತಿಯಿಂದ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆ.12ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಕಾಲೇಜಿನ ಆಡಳಿತಾಧಿಕಾರಿ ಎ.ಎಂ.ಅನಿರುದ್ಧ ಹೇಳಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಮೇಳದಲ್ಲಿ ಭಾಗವಹಿಸಲು 100ಕ್ಕೂ ಹೆಚ್ಚು ಕಂಪನಿಗಳು ಈಗಾಗಲೇ ಒಪ್ಪಿಗೆ ನೀಡಿವೆ. ಒಟ್ಟಾರೆಯಾಗಿ 9,400 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತರು https://forms.gle/TJMdSJnXLnaS1kWD8 ಲಿಂಕ್ ಬಳಸಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾಗವಹಿಸಲು ನೋಂದಣಿ ಶುಲ್ಕವಿರುವುದಿಲ್ಲ. ಅಭ್ಯರ್ಥಿಗಳು ಕನಿಷ್ಟ 10 ಸ್ವವಿವರ ಪ್ರತಿ, ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ತರಬೇಕು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿಗೆ ಮೊ.ಸಂ 9480884443 ಮತ್ತು 9480849430 ಯನ್ನು ಸಂಪರ್ಕಿಸಬಹುದು. ಅಂತೆಯೇ ಚಾಮರಾಜನಗರ, ಕೊಳ್ಳೇಗಾಲ, ತಿ.ನರಸೀಪುರ, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ, ಮದ್ದೂರು, ಮಂಡ್ಯ, ಮಳವಳ್ಳಿ, ಕೆ.ಎಂ.ದೊಡ್ಡಿ, ಕೆಆರ್‌ಎಸ್, ಬನ್ನೂರು, ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಎಚ್.ಡಿ.ಕೋಟೆಯಿಂದ ಕಾಲೇಜಿಗೆ ಬೆಳಗ್ಗೆ 7 ಗಂಟೆಗೆ ಉಚಿತವಾಗಿ ಬಸ್‌ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಕಾಲೇಜು ಮತ್ತು ಮೈಸೂರು ನಗರ ಬಸ್ ನಿಲ್ದಾಣ, ಮೈಸೂರು ರೈಲು ನಿಲ್ದಾಣ, ಮಣಿಪಾಲ್ ಆಸ್ಪತ್ರೆ ಜಂಕ್ಷನ್ ನಡುವೆ ಉದ್ಯೋಗಮೇಳದ ಇಡೀ ದಿನ ಶಟಲ್ ಬಸ್‌ಸೇವೆ ಮಾಡಲಾಗಿದೆ. ಬಸ್‌ಗೆ ಸಂಬಂಧಿಸಿದ ವಿವರಕ್ಕೆ ಮೊ.ಸಂ 9620228197 ಸಂಪರ್ಕಿಸುವಂತೆ ತಿಳಿಸಿದರು.
ಪ್ರಾಂಶುಪಾಲ ಡಾ.ಬಿ.ಜಿ.ನರೇಶ್‌ಕುಮಾರ್, ಶಿವಮೂರ್ತಿ, ಶಿವಸಾಗರ್, ಕೇಶವ ಇದ್ದರು.