

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಜೆ.ವಿ.ಎಸ್ ಎಲೆಕ್ಟ್ರಾನಿಕ್ಸ್, ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಸಹಭಾಗಿತ್ವದಲ್ಲಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಸೆ.22ರಂದು ಬೆಳಗ್ಗೆ 10.30ಕ್ಕೆ ನಗರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ(ಯಾವುದೇ ಟ್ರೇಡ್) ಹಾಗೂ ಯಾವುದೇ ಪದವಿ ಸೇರಿದಂತೆ ಡಿಪ್ಲೊಮೋ, ಬಿಇ, ಬಿ.ಟೆಕ್, ಇಇಇ, ಇಸಿಇ ಉತ್ತೀರ್ಣರಾಗಿರುವ 18 ರಿಂದ 30 ವರ್ಷದೊಳಗಿನವರು ಅಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಿರುವ ಸಂದರ್ಶನದಲ್ಲಿ ತಮ್ಮ ಸ್ವವಿವರೊಂದಿಗೆ ಹಾಜರಾಗಬಹುದು. ಮಾಹಿತಿಗಾಗಿ ದೂ.ಸಂ 08232-295124 ಅಥವಾ ಮೊ.ಸಂ 9164642684 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.