

ಹುಬ್ಬಳ್ಳಿ : ನಗರದ ಕೆಜಿಪಿ ಫೌಂಡೇಷನ್ ವತಿಯಿಂದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ ಮತ್ತು ಜಿಲ್ಲಾ ಉದೊ್ಯೕಗ ವಿನಿಮಯ ಕೇಂದ್ರದ ಸಹಯೋಗದಲ್ಲಿ ಶ್ರೀಗಂಧ ಶೇಟ್ ನೇತೃತ್ವದಲ್ಲಿ ಮೇ 25 ರಂದು ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ವಿದ್ಯಾನಗರದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬೃಹತ್ ಉದೊ್ಯೕಗ ಮೇಳ ಆಯೋಜಿಸಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಫೌಂಡೇಷನ್ನ ಮ್ಯಾನೇಜರ್ ಪ್ರಕಾಶ ನಾಯಿಕ, ಉದೊ್ಯೕಗ ಮೇಳದಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. 2,500 ಉದೊ್ಯೕಗಾವಕಾಶಗಳು ಲಭ್ಯ ಇವೆ. ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಐಟಿಐ, ಬಿಇ, ಡಿಪ್ಲೊಮಾ, ಬಿಇಡಿ ಸೇರಿ ವಿವಿಧ ಪದವೀಧರರು ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ವಿದ್ಯಾರ್ಹತೆ ಪ್ರಮಾಣ ಪತ್ರಗಳು, ಸ್ವ ವಿವರ, ಮೂರು ಭಾವಚಿತ್ರದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಅನುಪ ಕಮ್ಮಾರ, ರಾಜು ಪಾಟೀಲ, ವಿನಾಯಕ ಕಿತ್ತೂರ, ನಾಗರಾಜ ಸೋಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.