ಅಂಗವಿಕಲರಿಗೆ ಉದ್ಯೋಗ ಮೇಳ

IMG-20250311-WA0014.jpg
Published on

ಹುಬ್ಬಳ್ಳಿ: ವಿಶ್ವ ಮಹಿಳಾ ದಿನದ ಅಂಗವಾಗಿ ಸಮರ್ಥನಂ ಟ್ರಸ್ಟ್, ಹುಬ್ಬಳ್ಳಿ ರೌಂಡ್ ಟೇಬಲ್ 37 ಹಾಗೂ ಹುಬ್ಬಳ್ಳಿ ಲೇಡಿಸ್ ಸರ್ಕಲ್ 45 ವತಿಯಿಂದ ಅಂಗವಿಕಲರಿಗೆ ಉದ್ಯೋಗ ಮೇಳ ಏರ್ಪಡಿಸಲಾಗಿತ್ತು.

ಮೇಳದಲ್ಲಿ 350ಕ್ಕೂ ಹೆಚ್ಚು ಅಂಗವಿಕಲರು ಪಾಲ್ಗೊಂಡರು. 30ಕ್ಕೂ ಹೆಚ್ಚು ಕಂಪನಿಯ ಪ್ರತಿನಿಧಿಗಳು ಸಂದರ್ಶನ ನಡೆಸಿದರು.

ಅತಿಥಿಯಾಗಿದ್ದ ಡಾ. ವಿವೇಕ ಪಾಟೀಲ ಮಾತನಾಡಿ, ಅಂಗವಿಕಲತೆ ಎಂಬುದು ಸಾಧನೆಗೆ ಅಡ್ಡಿಯಾಗುವುದಿಲ್ಲ. ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರುವ ಶಕ್ತಿ ಅವರಲ್ಲಿ ಇರುತ್ತದೆ ಎಂದರು.

ಡಾ. ಅಪೂರ್ವ ರಾಂಪುರೆ ಮಾತನಾಡಿ, ಅಂಗವಿಕಲತೆ ಹೊಂದಿದ ಮಹಿಳೆ ಸಮಾಜದಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಬಲಳಾಗಿ ಬದುಕಲು ಮಹಿಳೆಗೆ ಉದ್ಯೋಗ ಎನ್ನುವುದು ಬಹಳ ಮಹತ್ವದ್ದು ಎಂದರು.

ಅನೇಕ ಮಹಿಳೆಯರು ಉದ್ಯೋಗ ಗಿಟ್ಟಿಸಿಕೊಂಡರು. ವೇದಿಕಾ, ಅನಂತ ಮುಳಗುಂದ ಇತರರು ಸಹಯೋಗ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net