22ರಂದು ಅಂಗವಿಕಲರಿಗಾಗಿ ಉದ್ಯೋಗ ಮೇಳ

job
Published on

ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜು.22ರಂದು ಪಾಲಿಟೆಕ್ನಿಕ್‌ನಲ್ಲಿ ಅಂಗವಿಕಲರಿಗಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಬಿ.ಇಳಂಗೋವನ್ ತಿಳಿಸಿದರು.

ಉದ್ಯೋಗ ಮೇಳದಲ್ಲಿ ಸುಮಾರು 15 ರಿಂದ 20 ವಿವಿಧ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಅಂದಾಜು 300 ಮಂದಿ ಅಂಗವಿಕಲರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ಆ ಕಂಪನಿಗಳು ತಮ್ಮಲ್ಲಿ ಸುಮಾರು 500 ಉದ್ಯೋಗಾವಕಾಶವಿದೆ ಎಂದು ತಿಳಿಸಿವೆ. 18ರಿಂದ 35 ವರ್ಷದ ಒಳಗಿನ ದೈಹಿಕ ನ್ಯೂನತೆ, ದೃಷ್ಟಿ ನ್ಯೂನತೆ, ವಾಕ್ ಮತ್ತು ಶ್ರವಣ ನ್ಯೂನತೆ ಇರುವವರು ಭಾಗವಹಿಸಬಹುದಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಡಿಪ್ಲೊಮಾ ಮತ್ತು ಪದವಿ ಉತ್ತೀರ್ಣರಾಗಿರಬೇಕಿದೆ. ಹೆಚ್ಚಿನ ಮಾಹಿತಿಗೆ ದೂ.8050709919 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಸುಭಾಷ್‌ಚಂದ್ರ, ಎಂ.ಶಿವರಾಜು, ಕೆ.ಕುಶಾಲ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net