ಪದವೀಧರರಿಗೆ ಉದ್ಯೋಗ ಮೇಳ

WEB LOGO
Published on

ವಿಜಯಪುರ: ನಗರದ ಬಿಎಲ್​ಡಿಇ ಸಂಸ್ಥೆಯ ಎ.ಎಸ್​. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಎಂಬಿಎ ವಿಭಾಗದಿಂದ ಜು. 3 ರಂದು ಸ್ನಾತಕ ಮತ್ತು ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗ ಮೇಳ (ಕ್ಯಾಂಪಸ್​ ಸಂದರ್ಶನ) ನಡೆಯಲಿದೆ.

ಅಂದು ಬೆಳಗ್ಗೆ 10 ಗಂಟೆಗೆ ಬಿಎಲ್​ಡಿಇ ಸಂಸ್ಥೆಯ ಹೊಸ ಆವರಣದ ಎಂಬಿಎ ಆಡಿಟೋರಿಯಂನಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಅದರಲ್ಲಿ ಪೇ&ಟಿಎಂ, ಆರ್​ಎನ್​ಎಸ್​ ಮೋರ್ಟಸ್​, ಫೋನ್​&ಪೇ, ಕನಿಷ್ಕ ಆಭರಣ, ಐಎಫ್​ಬಿ ಮುತ್ತೂಟ್​ ಫೈನಾನ್ಸ್​, ನಿಪ್ಪೊನ್​ ಪೇಂಟ್ಸ್​, ಯಟಿಕಾರ್ಪ್​, ಜಿಯೋ ಸೇರಿ ಮುಂತಾದ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ.

ಆಸಕ್ತರು ಇಲ್ಲಿನ ಲಿಂಕ್​ ಮೂಲಕ ಜಠಿಠಿಟಠ://್ಛಟ್ಟಞಠ.ಜ್ಝಛಿ/4ಜಿ5ಢಆಔಖಟಿಓಈಇಟ್ಞಖ769 ಹೆಸರು ನೊಂದಾಯಿಸಿಕೊಳ್ಳುವ ಮೂಲಕ ಉದ್ಯೋಗ ಮೇಳದ ಸದುಪಯೋಗ ಪಡೆಯುವಂತೆ ವಿಭಾಗದ ನಿರ್ದೇಶಕ ಡಾ. ಚಿದಾನಂದ ಬ್ಯಾಹಟ್ಟಿ ಮತ್ತು ಉದ್ಯೋಗ ನಿಯೋಜನೆ ಅಧಿಕಾರಿ ಡಾ. ಮಹಾಂತೇಶ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net