

ಹುಬ್ಬಳ್ಳಿ: ಎಸ್.ಪಿ. ಫೌಂಡೇಷನ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಫೆ. 8ರಂದು ಬೆಳಗ್ಗೆ 10ಕ್ಕೆ ನವಲಗುಂದದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಫೌಂಡೇಷನ್ ಮುಖ್ಯಸ್ಥ ಸದಾನಂದ ಗಾಳಪ್ಪನವರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಲಗುಂದ ವಿಧಾನಸಭಾ ಕ್ಷೇತ್ರದ ಯುವಕ ಯುವತಿಯರು ಮಾತ್ರವಲ್ಲ, ಅಕ್ಕಪಕ್ಕದ ಊರು, ಜಿಲ್ಲೆಯ ನಿರುದ್ಯೋಗಿಗಳು ಇದರ ಪ್ರಯೋಜನ ಪಡೆಯಬಹುದು ಎಂದರು.
ಟಾಟಾ, ಎಚ್ ಡಿಎಫ ಸಿ, ಫೋನ್ಪೇ, ಮುತ್ತೂಟ್, ಆರ್ಎನ್ಎಸ್ ಮೋರ್ಟಸ್, ಟಿವಿಎಸ್ ಪ್ರಕಲ್ಪ, ಆಕ್ಸಿಸ್ ಬ್ಯಾಂಕ್, ಎಸ್ಬಿಐ, ಹುಂಡೈ, ವಾಯ್ಸ್ ಆಫ್ ನೀಡೀ ಫೌಂಡೇಷನ್ ಸೇರಿದಂತೆ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಸುಮಾರು 2500 ಉದ್ಯೋಗಗಳು ಖಾಲಿ ಇವೆ ಎಂದು ಕಂಪನಿಗಳು ತಿಳಿಸಿವೆ. ಇದಕ್ಕಾಗಿ ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಡಿಪ್ಲೋಮಾ, ಬಿಇ, ಎಂಟೆಕ್, ಬಿಇಡಿ, ಡಿಇಡಿ, ಎಂಬಿಎ, ಎಂಎಸ್ಡಬ್ಲೂ ಸೇರಿ ಸ್ನಾತಕೋತ್ತರ ಪದವೀಧರರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸೋಮು ಪಟ್ಟಣಶೆಟ್ಟಿ, ರೋಹಿತ ಮತ್ತಿಹಳ್ಳಿ, ಪ್ರಭು ಗುಳಗನ್ನವರ, ಮುತ್ತು ಚಾಕಲಬ್ಬಿ, ರಾಜು ಪಾಟೀಲ, ಶಿವಯೋಗಿ ಇತರರು ಇದ್ದರು.
ಸ್ಜ್ಯಾನ್ ಮಾಡಿ ಮೇಳಕ್ಕೆ ನೋಂದಣಿ ಮಾಡಿಕೊಳ್ಳಬಹುದು ಎಂದರು.