

ಹುಬ್ಬಳ್ಳಿ : ಇಲ್ಲಿನ ವಿದ್ಯಾನಗರದ ಕೆಎಂಸಿಆರ್ಐ ಹಿಂಭಾಗದ ಬೈಲಪ್ಪನವರ ನಗರದಲ್ಲಿನ ಜೈನ್ ಕಾಲೇಜು ಆವರಣದಲ್ಲಿ ಮೇ 23ರಂದು ಬೆಳಗ್ಗೆ 9 ಗಂಟೆಗೆ ಮೇಳ ಆಯೋಜಿಸಲಾಗಿದೆ.
ಜೈನ್ ಬಿಬಿಎ ಮತ್ತು ಬಿಕಾಂ ಕಾಲೇಜಿನ ಸಹಯೋಗದೊಂದಿಗೆ ಜೈನ್ ವಿಶ್ವವಿದ್ಯಾಲಯವು 2023ರಲ್ಲಿ ಹಾಗೂ ಪ್ರಸಕ್ತ ಸಾಲಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ‘ಕನೆಕ್ಟ್ ಟು ಕರಿಯರ್ಸ್’ ಹೆಸರಿನ ಉದ್ಯೋಗ ಮೇಳ ಏರ್ಪಡಿಸಿದೆ.
ಪ್ರಗತಿ ಇನ್ಫೋಕಾಮ್ ರುಪೀಕ್, ನೋ ಬ್ರೋಕರ್, ಜೊಯಲ್ಲುಕಾಸ್, ಬೆಲ್ಲದ (ಹುಬ್ಬಳ್ಳಿ), ಕಲ್ಯಾಣ ಜ್ಯುವೆಲರ್ಸ್, ಬಜಾಜ್ ಅಲೈಂಜ್, ಮುತ್ತೂಟ್ ಫೈನಾನ್ಸ್, ಇಂಗ್ಲಿಷ್ ಗುರುಕುಲ, ಲರ್ನಿಂಗ್ ರೂಟ್ಸ್, ಟೆಕ್ ಟೈಗರ್ಸ್, ಜಿಟಿಟಿ, ಪಂಜುರ್ಲಿ ಲ್ಯಾಬ್ಸ್, ಹೈಪರ್ ವೆರ್ಜ್ ಹಾಗೂ ಇನ್ನಿತರ ಕಂಪನಿಗಳು ಭಾಗವಹಿಸಲಿವೆ.
ಅಂತಿಮ ವರ್ಷದಲ್ಲಿರುವ ಅಥವಾ ಪದವಿ ಪಾಸಾದವರು ಹೆಸರು ನೋಂದಾಯಿಸಬಹುದು. ಸ್ಥಳದಲ್ಲಿಯೇ ಹೆಸರು ನೋಂದಾಯಿಸಲು ಸಹ ಅವಕಾಶ ಇದೆ.