

ಹುಬ್ಬಳ್ಳಿ: ಇಲ್ಲಿಯ ದ್ಯಾವಪ್ಪನವರ ಕೊರವಿ ಸಿದ್ನಾಳ ಎಜ್ಯುಕೇಶನ್ ಟ್ರಸ್ಟ್ನ ಚೇತನ ಬಿಜಿನೆಸ್ ಸ್ಕೂಲ್ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವೀಧರ ವಿದ್ಯಾಥಿರ್ಗಳಿಗಾಗಿ ಜುಲೈ 8ರಂದು ಬೆಳಗ್ಗೆ 8 ಗಂಟೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸ್ಕೂಲ್ ನಿರ್ದೇಶಕ ಡಾ. ವಿ.ಎಂ. ಕೊರವಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ವಿದ್ಯಾಥಿರ್ಗಳು, ಉದ್ಯೋಗ ಆಕಾಂಗಳ ಅನುಕೂಲಕ್ಕಾಗಿ ಮೇಳ ಆಯೋಜಿಸಲಾಗಿದೆ.
ಸುಮಾರು 22 ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದ್ದು, ಸಾವಿರಕ್ಕೂ ಹೆಚ್ಚು ಉದ್ಯೋಗ ನೀಡಲಿವೆ ಎಂದರು.
ಐಸಿಐಸಿಐ ಬ್ಯಾಂಕ್, ಮುತ್ತೂಟ್ ಫೈನಾನ್ಸ್, ಬ್ಲು ಮ್ಯಾಟ್ರಿಕ್ಸ್ ಕನೆಕ್ಟ್ ಪೆವೇಟ್ ಲಿಮಿಟೆಡ್, ಸಿ3 ಸಲುಷನ್ ಬಿಪಿಒ ಇಂಡಿಯಾ ಲಿಮಿಟೆಡ್, ವಿ5 ಗ್ಲೋಬಲ್ ಸವಿರ್ಸಸ್ ಲಿಮಿಟೆಡ್, ಸಂಕೇಶ್ವರ ವೆಂಚರ್ಸ್ ಮುಂತಾದ ಕಂಪನಿಗಳು ಅಭ್ಯಥಿರ್ಗಳ ಸಂದರ್ಶನ ನಡೆಸಲಿವೆ.
ತಾಂತ್ರಿಕ ಮತ್ತು ತಾಂತ್ರಿಕೇತರ ಯಾವುದೇ ಪದವಿ ಹಿನ್ನೆಲೆಯ ಅಭ್ಯಥಿರ್ಗಳು ಪಾಲ್ಗೊಳ್ಳಬಹುದು ಎಂದು ಹೇಳಿದರು.
ಈಗಾಗಲೇ ಉತ್ತರ ಕರ್ನಾಟಕದ 500ಕ್ಕೂ ಹೆಚ್ಚು ಕಾಲೇಜುಗಳಿಗೆ ಮಾಹಿತಿ ನೀಡಲಾಗಿದೆ. ಈ ಭಾಗದ ಅಭ್ಯಥಿರ್ಗಳು ಹೆಚ್ಚು ಉದ್ಯೋಗ ಪಡೆಯಲಿ ಎಂಬುದು ತಮ್ಮ ಉದ್ದೇಶ ಎಂದು ಕೊರವಿ ಹೇಳಿದರು.