

ಮಂಗಳೂರು : ಎಂಆರ್‌ಪಿಎಲ್ 4ನೇ ಹಂತದ ವಿಸ್ತರಣೆಗೆ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡುವಂತೆ ಎಂಎಲ್‌ಸಿ ಐವನ್ ಡಿಸೋಜಾ ನೇತೃತ್ವದ ನಿಯೋಗ ಬುಧವಾರ ಜಿಲ್ಲಾಧಿಕಾರಿಯನ್ನು ಅವರು ಭೇಟಿಯಾಗಿ ವಿನಂತಿ ಮಾಡಿದೆ.
ಕಾನೂನು ಪ್ರಕಾರ ಭೂಮಿ ಕಳೆದುಕೊಂಡ ಕುಟುಂಬದ ಸದಸ್ಯರ ಅರ್ಹತೆ ಪರಿಗಣಿಸಿ ಉದ್ಯೋಗಾವಕಾಶ ಕಲ್ಪಿಸಬೇಕು. ಹಲವು ಬಾರಿ ಈ ಬಗ್ಗೆ ಚರ್ಚೆ ನಡೆದರೂ ಉದ್ಯೋಗ ದೊರೆತಿಲ್ಲ ಎಂದು ನಿಯೋಗದ ಸದಸ್ಯರು ದೂರಿದರು.
ಭೂಮಿ ಕಳಕೊಂಡವರಿಗೆ ಸಕಾಲದಲ್ಲಿ ಪ್ಯಾಕೇಜ್ ಹಾಗೂ ಉದ್ಯೋಗ ನೀಡಿದರೆ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ. ಸಾರ್ವಜನಿಕರು ಕೂಡಾ ಸಹಕರಿಸುತ್ತಾರೆ. ಜಿಲ್ಲಾಡಳಿತ ಯಾವುದೇ ಮುಲಾಜಿಲ್ಲದೆ ಕೆಲಸವನ್ನು ನಿರ್ವಹಿಸುವ ಮೂಲಕ ಉದ್ಯೋಗ
ದೊರಕಿಸಿಕೊಡಬೇಕೆಂದು ಐವನ್ ಡಿಸೋಜಾ ಒತ್ತಾಯಿಸಿದರು.
ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭರವಸೆ ನೀಡಿದರು. ಕುತ್ತೆತ್ತೂರು, ಪೆರ್ಮುದೆ,
ತೆಂಕ ಎಕ್ಕಾರು ಎಂಆರ್‌ಪಿಎಲ್ 4ನೇ ಹಂತದ ವಿಸ್ತರಣೆ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ಡೋಣಿ ಸುವೆರಿಸ್, ಸುಧಾಕರ ಶೆಟ್ಟಿ,
ಕೇಶವ ಶೆಟ್ಟಿ, ಕೃಷ್ಣ ಮೂರ್ತಿ, ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.